ಅಪರಾಧ-ಅಪಘಾತ : ರಸ್ತೆ ಬದಿ ನಿಂತಿದ್ದ ಮಹಿಳೆಗೆ ಕಾರು ಡಿಕ್ಕಿ – ಗಾಯ : ವ್ಯಕ್ತಿಗೆ ಹಲ್ಲೆ – ಕೊಲೆ ಬೆದರಿಕೆ

ಕಾರ್ಕಳ : ಕೆಎಂಇಎಸ್‌ ಶಾಲಾ ಬಳಿಯ ಅಂಗಡಿ ಮುಂಭಾಗ ನಿಂತುಕೊಂಡಿದ್ದ ಮಹಿಳೆಗೆ ಕಾರು ಡಿಕ್ಕಿಯಾದ ಘಟನೆ ನ. 1ರಂದು ನಡೆದಿದೆ. ನಿಟ್ಟೆ ಗ್ರಾಮದ ದರ್ಶನ್‌ ರೈ ಎಂಬುವವರು ತನ್ನ ತಾಯಿ ವಿದ್ಯಾ ಡಿ. ರೈ (57) ಎಂಬವರೊಂದಿಗೆ ಕುಕ್ಕುಂದೂರು ಗ್ರಾಮದ ಕೆ.ಎಂ.ಇ.ಎಸ್. ಶಾಲೆಯ ಕ್ರಾಸ್ ಬಳಿಯ ಕಲ್ಪವೃಕ್ಷ ಅಂಗಡಿಗೆ ಹೋಗಿ ಸಾಮಗ್ರಿ ಪಡೆದು ವಾಪಾಸ್ ತಮ್ಮ ಕಾರಿನತ್ತ ಬಂದು ನಿಂತುಕೊಂಡಿದ್ದ ವೇಳೆ ಪುಲ್ಕೇರಿ ಕಡೆಯಿಂದ ಸಿದ್ಧಾರ್ಥ್‌ ರೆಡ್ಡಿ ಎಂಬಾತ‌ ಚಲಾಯಿಸಿಕೊಂಡು ಬರುತ್ತಿದ್ದ ಕಾರು ವಿದ್ಯಾ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯಾ ಅವರು ಗಾಯಗೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜೆಕಾರು : ವ್ಯಕ್ತಿಗೆ ಹಲ್ಲೆ – ಕೊಲೆ ಬೆದರಿಕೆ

ಅಜೆಕಾರು : ಜಮೀನಿನ ಪಕ್ಕದಲ್ಲಿ ಕಲ್ಲು ಇಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಹೊಡೆದಾಟವಾದ ಘಟನೆ ಮರ್ಣೆ ಗ್ರಾಮದಲ್ಲಿ ನ. 3ರಂದು ನಡೆದಿದೆ. ಮರ್ಣೆ ಗ್ರಾಮದ ಗುಡ್ಡೆಯಂಗಡಿ ನಿವಾಸಿ ಸತೀಶ ಶೆಟ್ಟಿ (55) ಮನೆಗೆ ಬರುತ್ತಿರುವಾಗ ರಾಧಾಕೃಷ್ಣ ಶೆಟ್ಟಿ ಎಂಬವರು ಜಮೀನಿನ ಪಕ್ಕದಲ್ಲಿ ಕಲ್ಲು ಇಟ್ಟಿರುವ ಬಗ್ಗೆ ಆಕ್ಷೇಪಿಸಿ, ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುತ್ತಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಿರುವುದಾಗಿ ಸತೀಶ್‌ ಶೆಟ್ಟಿ ಅವರು ಅಜೆಕಾರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

error: Content is protected !!
Scroll to Top