ಇಲ್ಲಿದೆ ಈ ಸಲದ ಕಂಬಳ ವೇಳಾಪಟ್ಟಿ
ಮಂಗಳೂರು: ದೀಪಾವಳಿ ಹಬ್ಬ ಮುಗಿಯಿತು. ಇನ್ನು ಕಂಬಳದ ಸೀಸನ್ ಶುರುವಾಗಲಿದೆ. ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಕ್ರೀಡೆಯ ಬಹಳ ಕ್ರೇಜ್ ಇದೆ. ಈ ಸಲ ಸಾಕಷ್ಟು ಯಶಸ್ವಿ ಆಗಿರುವ ಕಾಂತಾರ ಚಿತ್ರದಲ್ಲೂ ಕಂಬಳವನ್ನು ತೋರಿಸಿರುವುದರಿಂದ ಕಂಬಳದ ಕುರತು ದೇಶ ವಿದೇಶಗಳಲ್ಲೂ ಕುತೂಹಲ ಕೆರಳಿಸಿದೆ.
ನವೆಂಬರ್ 26ಕ್ಕೆ ಆರಂಭವಾಗಲಿರುವ ಕಂಬಳ ಋತು ಎಪ್ರಿಲ್ 8ರ ವರೆಗೆ ನಡೆಯಲಿದೆ. ಈ ವರ್ಷದ ಕಂಬಳದ ವೇಳಾಪಟ್ಟಿ ಇಂತಿದೆ:
ನವೆಂಬರ್ 26 – ಕಕ್ಯೆಪದವು
ಡಿಸೆಂಬರ್ 3 – ವೇಣೂರು
ಡಿಸೆಂಬರ್ 10 – ಬಾರಾಡಿಬೀಡು
ಡಿಸೆಂಬರ್ 13 – ಶಿರ್ವ
ಡಿಸೆಂಬರ್ 17 – ಹೊಕ್ಕಾಡಿಗೋಳಿ
ಡಿಸೆಂಬರ್ 24 – ಮೂಡಬಿದಿರೆ
ಡಿಸೆಂಬರ್ 31 – ಮೂಲ್ಕಿ ಅರಸು ಕಂಬಳ (ಹಳೆಯಂಗಡಿ)
ಜನವರಿ 7 – ಮಿಯಾರು
ಜನವರಿ 14 – ಅಡ್ವೆ
ಜನವರಿ 21 – ಮಂಗಳೂರು
ಜನವರಿ 28 – ಐಕಳ ಬಾವ
ಫೆಬ್ರವರಿ 04 – ಪುತ್ತೂರು
ಫೆಬ್ರವರಿ 11 – ಕಟಪಾಡಿ
ಫೆಬ್ರವರಿ 18 – ವಾಮಂಜೂರು
ಫೆಬ್ರವರಿ 25 – ಜಪ್ಪಿನಮೊಗರು
ಮಾರ್ಚ್ 04 – ಬಂಟ್ವಾಳ
ಮಾರ್ಚ್ 11 – ಉಪ್ಪಿನಂಗಡಿ
ಮಾರ್ಚ್ 18 – ಬಂಗಾಡಿ
ಮಾರ್ಚ್ 25 – ಪೈವಳಿಕೆ
ಏಪ್ರಿಲ್ 01 – ಸುರತ್ಕಲ್
ಏಪ್ರಿಲ್ 08 – ಪಣಪಿಲ