ಡ್ರೈ ಫ್ರೂಟ್ಸ್ ಅನ್ನು ಹೇಗೆ ಸೇವಿಸಬೇಕು


ಡ್ರೈ ಫ್ರೂಟ್ಸ್ ಎಲ್ಲರಿಗೂ ಇಷ್ಟ. ಮಿತವಾಗಿ ಸೇವಿಸಿದರೆ ನಮ್ಮ ಆರೋಗ್ಯವೂ ಸುಧಾರಿಸುತ್ತದೆ. ಇದರಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ .
ಬಾದಾಮ್ ಪಿಸ್ತಾ ವಾಲ್ನಟ್ ಏಪ್ರಿಕಾಟ್ ನ ಗುಣಗಳು –
• ಇದು ಉಷ್ಣವೀರ್ಯ, ಗುರು ಅಂದರೆ ಜೀರ್ಣವಾಗಲು ಸಮಯ ತಗಲುತ್ತದೆ. ರುಚಿಯಲ್ಲಿ ಮಧುರ ರಸ ಹಾಗೂ ಸ್ನಿಗ್ಧ ಗುಣ ಅಂದರೆ ಜಿಡ್ಡಿನಂಶದಿಂದ ಕೂಡಿರುತ್ತದೆ.
• ವಾತ ದೋಷವನ್ನು ಶಮನಗೊಳಿಸುತ್ತದೆ. ಪಿತ್ತ ಹಾಗೂ ಕಫ ದೋಷವನ್ನು ಹೆಚ್ಚಿಸುತ್ತದೆ.
• ವಾತ ಪ್ರಕೃತಿಯುಳ್ಳ ಮನುಷ್ಯರಿಗೆ ವ್ಯಕ್ತಿಗಳಿಗೆ ಒಳ್ಳೆಯದು.
• ದೇಹದಲ್ಲಿ ನೋವು, ರೂಕ್ಷತೆ, ಗಂಟುನೋವು ಇರುವವರಿಗೆ ಇದು ಒಳ್ಳೆಯದು.
• ಗುರು ಆಹಾರ ವಿರುವುದರಿಂದ ಮಿತವಾಗಿ ಬಳಸಿ.
• ದಿನಕ್ಕೆ ಎರಡರಿಂದ ಮೂರು ಸೇವಿಸಬಹುದು ಅಧಿಕ ಸೇವಿಸಬೇಡಿ.
• ಹಿಂದಿನ ದಿನ ನೀರಿನಲ್ಲಿ ನೆನೆಸಿ ಮರುದಿನ ಅದನ್ನು ಸೇವಿಸುವುದರಿಂದ ಜೀರ್ಣವಾಗಲು ಸುಲಭವಾಗುತ್ತದೆ.
• ಅಧಿಕ ಸೇವನೆಯಿಂದ ಅಜೀರ್ಣಕ್ಕೆ ನಾಂದಿಯಾಗುತ್ತದೆ. ಅಜೀರ್ಣದಿಂದ ಅನೇಕ ರೋಗಗಳು ಬರುವ ಸಂಭವವಿರುತ್ತದೆ.
• ಹೇಮಂತ ಹಾಗೂ ಶಿಶಿರ ಋತುವಿನಲ್ಲಿ ನಮ್ಮ ಜಠರಾಗ್ನಿಯು ಬಲವಾಗಿರುವುದರಿಂದ ಈ ಸಮಯದಲ್ಲಿ ಡ್ರೈಫ್ರೂಟ್ಸ್ ಸೇವನೆ ಒಳ್ಳೆಯದು. ಇತರ ಋತುವಿನಲ್ಲಿ ನಮ್ಮ ಅಗ್ನಿಬಲ ಕಮ್ಮಿ ಇರುವುದರಿಂದ ಸೇವನೆ ಅಷ್ಟು ಹಿತಕರವಲ್ಲ.
• ಪಿತ್ತ ಹಾಗೂ ಕಫಗಳು ಪ್ರಕೃತಿಯವರು ಇದನ್ನು ಕಮ್ಮಿ ಸೇವಿಸಿ. ಪಿತ್ತರೋಗ ಇರುವವರು ಆ್ಯಸಿಡಿಟಿ ಇರುವವರು ಜಾಗ್ರತೆಯಿಂದ ಸೇವಿಸಿ.
• ಚರ್ಮ ಹಾಗೂ ಕೂದಲಿಗೆ ಒಳ್ಳೆಯದು .
ಗೇರುಬೀಜದ ಗುಣಗಳು –
• ಗೇರುಬೀಜವೂ ಉಷ್ಣವೀರ್ಯ, ಮಧುರ ರಸ ಹಾಗೂ ಲಘು ಅಂದರೆ ಜೀರ್ಣ ಸುಲಭವಾಗಿ ಜೀರ್ಣವಾಗುತ್ತದೆ. ವಾತ ಹಾಗೂ ಕಫಪ್ರಕೃತಿಯವರು ಇದನ್ನು ಸೇವಿಸಬಹುದು.
• ದಿನಕ್ಕೆ ಎರಡರಿಂದ ನಾಲ್ಕು ಗೇರುಬೀಜವನ್ನು ಸೇವಿಸಬಹುದು. ತುಪ್ಪದಲ್ಲಿ ಹುರಿದು ಕೂಡ ಸೇವಿಸಬಹುದು. ಇದರಿಂದ ಇದರಿಂದ ದೇಹದ ತೂಕ ಹೆಚ್ಚುತ್ತದೆ. ಮೂಳೆ, ಚರ್ಮ ಹಾಗೂ ಹೃದಯಕ್ಕೆ ಒಳ್ಳೆಯದು, ಬೊಜ್ಜು ಇರುವವರು ಇದನ್ನು ಕಡಿಮೆ ಸೇವಿಸಿ.
ಒಣದ್ರಾಕ್ಷಿಯ ಗುಣಗಳು –
• ಒಣ ದ್ರಾಕ್ಷಿಯೂ ಮಧುರ ರಸ, ಸ್ನಿಗ್ಧ ಹಾಗೂ ಶೀತವೀರ್ಯ ಹೊಂದಿದೆ. ವಾತ ಪಿತ್ತ ರೋಗಗಳಿಗೆ ಉತ್ತಮ ಔಷಧ. ರಕ್ತಸ್ರಾವ, ಬಲಹೀನತೆ, ಆ್ಯಸಿಡಿಟಿಗೆ ಒಳ್ಳೆಯ ಮದ್ದು . ರಾತ್ರಿ ಎಂಟರಿಂದ ಹತ್ತು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿ ಮರುದಿನ ಅದನ್ನು ಸೇವಿಸಿ. ನೆನೆಸಿದ ನೀರನ್ನು ಕೂಡ ಸೇವಿಸಬಹುದು. ಇದು ಮೃದು ವಿರೇಚಕ ಕೂಡ. ಮಲಬದ್ಧತೆ ಇರುವವರಿಗೆ ಒಳ್ಳೆಯದು
ಖರ್ಜೂರದ ಗುಣಗಳು –
ಖರ್ಜೂರವು ರುಚಿಯಲ್ಲಿ ಮಧುರ ಗುರು ಅಂದರೆ ಜೀರ್ಣವಾಗಲು ಸಮಯ ತಗುಲುತ್ತದೆ ಹಾಗೂ ಶೀತವೀರ್ಯ ಹೊಂದಿದೆ. ವಾತ, ಪಿತ್ತ ರೋಗಗಳಿಗೆ ಒಳ್ಳೆಯದು .ಇದು ದೇಹದ ಧಾತುವನ್ನು ವೃದ್ಧಿಸುತ್ತದೆ. ಬಲವನ್ನು ಹಾಗೂ ವೀರ್ಯವನ್ನು ಹೆಚ್ಚಿಸುತ್ತದೆ. ಖರ್ಜೂರವನ್ನು ತುಪ್ಪದ ಜೊತೆ ಸೇವಿಸಿದರೆ ಒಳ್ಳೆಯದು ಅಥವಾ ಹಾಲಿನಲ್ಲಿ ಬೇಯಿಸಿ ಕೂಡ ಸೇವಿಸಬಹುದು.


ಡಾ.ಹರ್ಷಾ ಕಾಮತ್

Latest Articles

error: Content is protected !!