ಬಾಲಕಿ ಮೇಲೆ ಅತ್ಯಾಚಾರ : ಇಬ್ಬರು ಆರೋಪಿಗಳಿಗೆ ಮರಣ ದಂಡನೆ

11 ತಿಂಗಳಲ್ಲಿ ತೀರ್ಪು ಪ್ರಕಟ

ಪ್ರತಾಪಗಢ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲ್ಲಲು ಯತ್ನಿಸಿದ ಇಬ್ಬರು ಆರೋಪಿಗಳಿಗೆ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಪೋಕ್ಸೊ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಡಿಸೆಂಬರ್ 27, 2021ರಂದು ಘಟನೆ ನಡೆದಿದ್ದು, 11 ತಿಂಗಳೊಳಗೆ ವಿಚಾರಣೆ ನಡೆದು ತೀರ್ಪು ಪ್ರಕಟವಾಗಿದೆ. ಬ್ಬರು ಆರೋಪಿಗಳಿಗೆ ತಲಾ 50,000 ರೂಪಾಯಿ ದಂಡವನ್ನೂ ವಿಧಿಸಿದೆ. ಹಲೀಮ್ ಮತ್ತು ರಿಜ್ವಾನ್ ಆರೋಪಿಗಳು
ಆರೋಪಿಗಳಾದ ಹಲೀಮ್, ರಿಜ್ವಾನ್ ಮತ್ತು ಅಪ್ರಾಪ್ತ ವಯಸ್ಸಿನ ಇನ್ನೊಬ್ಬ ಇನ್ನೊಬ್ಬ ಬಾಲಕಿಯ ಮೇಲೆ ಅತ್ಯಾಚಾರ ರೈಲ್ವೇ ಹಳಿ ಮೇಲೆ ಎಸೆದುಹೋಗಿದ್ದರು. ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತನಾಗಿದ್ದರಿಂದ ಆತನ ಪ್ರಕರಣವನ್ನು ಬಾಲಾಪರಾಧಿ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
ಬಾಲಕಿಯ ಸಹೋದರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಹೋದರಿಯನ್ನು ಪ್ರಯಾಗರಾಜ್‌ನಲ್ಲಿರುವ ಎಸ್‌ಆರ್‌ಎನ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಐದು ದಿನಗಳ ನಂತರ ಪ್ರಜ್ಞೆ ಬಂದಾಗ ಆಕೆ ಪೊಲೀಸರ ಮುಂದೆ ಹೇಳಿಕೆ ನೀಡಿ ಮೂವರು ಆರೋಪಿಗಳನ್ನು ಗುರುತಿಸಿದ್ದಾಳೆ.

Latest Articles

error: Content is protected !!