Thursday, December 1, 2022
spot_img
Homeಸುದ್ದಿಮತ್ತೆ ಗ್ಯಾಸ್‌ ಚೇಂಬರ್‌ ಆದ ದಿಲ್ಲಿ

ಮತ್ತೆ ಗ್ಯಾಸ್‌ ಚೇಂಬರ್‌ ಆದ ದಿಲ್ಲಿ

ಶಾಲೆಗಳಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ

ಹೊಸದಿಲ್ಲಿ: ದಿಲ್ಲಿ ಮತ್ತೆ ಗ್ಯಾಸ್‌ ಚೇಂಬರ್‌ನಂತಾಗಿದೆ. ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದ ಕಾರಣ ಜನರಿಗೆ ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿಯಿದೆ. ನಾಳೆಯಿಂದ ದಿಲ್ಲಿಯಲ್ಲಿ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು ಮಾಲಿನ್ಯ ಸಹಜ ಸ್ಥಿತಿಗೆ ಬರುವವರೆಗೆ ರಜೆ ಮುಂದುವರಿಯಲಿದೆ. ಮಾಲಿನ್ಯ ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾಳೆಯಿಂದ ದೆಹಲಿಯ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮುಚ್ಚುತ್ತಿದ್ದೇವೆ, 5 ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಸುಧಾರಿಸುವವರೆಗೆ ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗುತ್ತದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ವಾಹನಗಳಿಗೆ ಬೆಸ-ಸಮ ಯೋಜನೆಯನ್ನು ಜಾರಿಗೊಳಿಸಬೇಕೆ ಎಂದು ಯೋಚಿಸುತ್ತಿದ್ದೇವೆ. ಇದು ಆಪಾದನೆ ಮಾಡುತ್ತಾ ಕೂರುವ, ಬೇರೆಯವರ ಮೇಲೆ ಬೆರಳು ತೋರಿಸುವ ಸಮಯವಲ್ಲ. ರಾಜಕೀಯ ಮಾಡುತ್ತಾ ಕಾಲಹರಣ ಮಾಡುವುದು ಬೇಡ, ಉತ್ತರ ಭಾರತವನ್ನು ಮಾಲಿನ್ಯ ಸಮಸ್ಯೆಯಿಂದ ರಕ್ಷಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!