Tuesday, December 6, 2022
spot_img
Homeಸುದ್ದಿನವಜಾತ ಶಿಶುವಿನ ಹೊಟ್ಟೆಯಲ್ಲಿ ಎಂಟು ಭ್ರೂಣ

ನವಜಾತ ಶಿಶುವಿನ ಹೊಟ್ಟೆಯಲ್ಲಿ ಎಂಟು ಭ್ರೂಣ

ವಿಶ್ವದಲ್ಲೇ ಮೊದಲ ಪ್ರಕರಣ

ರಾಂಚಿ: ಜನಿಸಿ 21 ದಿನವಾಗಿರುವ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಎಂಟು ಭ್ರೂಣಗಳು ಪತ್ತೆಯಾಗಿರುವ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ಬೆಳಕಿಗೆ ಬಂದಿದೆ.
ನವಜಾತ ಹೆಣ್ಣುಮಗು ಅಕ್ಟೋಬರ್ 10, 2022 ರಂದು ರಾಮಗಢದಲ್ಲಿ ಜನಿಸಿತ್ತು. ಮಗುವಿನ ಆರೋಗ್ಯ ಹದಗೆಟ್ಟಾಗ, ರಾಮಗಢದ ಆಸ್ಪತ್ರೆಗೆ ದಾಖಲಿಸಿ, ಸಿಟಿ ಸ್ಕ್ಯಾನ್ ಮಾಡಲಾಯಿತು. ಸಿಟಿ ಸ್ಕ್ಯಾನ್ ವರದಿ ನೋಡಿದ ವೈದ್ಯರು ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ಭಾವಿಸಿದ್ದರು. ನಂತರ ಹೊಟ್ಟೆನೋವು ಕಾಣಿಸಿಕೊಂಡ ತಕ್ಷಣ ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗೆ ರಾಂಚಿಗೆ ಕರೆತರಲಾಯಿತು.
ನವಜಾತ ಶಿಶುವಿಗೆ ನವೆಂಬರ್ 1ರಂದು ರಾಂಚಿ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯಿತು.ಎಂಟು ಭ್ರೂಣಗಳಿರುವುದು ಖಚಿತವಾಯಿತು. ವೈದ್ಯರು ಈ ಎಂಟು ಭ್ರೂಣಗಳನ್ನು ತೆಗೆದಿದ್ದಾರೆ. ಭ್ರೂಣಗಳ ಗಾತ್ರವು ಮೂರು ಸೆಂಟಿಮೀಟರ್‌ಗಳಿಂದ ಐದು ಸೆಂಟಿಮೀಟರ್‌ಗಳವರೆಗೆ ಇತ್ತು.
ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಫೆಟಸ್-ಇನ್-ಫೀಟು (ಎಫ್‌ಐಎಫ್) ಎಂದು ಕರೆಯಲಾಗುತ್ತದೆ, “ಇದುವರೆಗೆ ಲಭ್ಯವಿರುವ ದಾಖಲೆಗಳ ಪ್ರಕಾರ, ಹೆಚ್ಚಿನ ಎಫ್‌ಐಎಫ್ ಪ್ರಕರಣಗಳಲ್ಲಿ ಒಂದು ಭ್ರೂಣವು ವರದಿಯಾಗಿದೆ. ಎಂಟು ಭ್ರೂಣಗಳ ಪ್ರಕರಣವು ಎಲ್ಲಿಯೂ ವರದಿಯಾಗಿರಲಿಲ್ಲ. ಇದು ಬಹಳ ಅಪರೂಪ ಮತ್ತು ಐದು ಲಕ್ಷ ಜನಗಳಲ್ಲಿ ಒಂದು ಮಗುವಿನಲ್ಲಿ ಸಂಭವಿಸುತ್ತದೆ. ಇದನ್ನು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಲು ಸಿದ್ಧತೆ ನಡೆಸಿದ್ದೇವೆಂದು ರಾಂಚಿಯ ರಾಣಿ ಆಸ್ಪತ್ರೆಯ ಮುಖ್ಯಸ್ಥ ರಾಜೇಶ್ ಸಿಂಗ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!