ಕಾರ್ಕಳ : ಚರಂಡಿಗೆ ಬಿದ್ದ ಬೈಕ್‌ – ಸವಾರ ಸಾವು

ಕಾರ್ಕಳ : ಬೈಕ್‌ ಸವಾರ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ನ. 2ರಂದು ನಕ್ರೆ ಜಂಕ್ಷನ್‌ ಬಳಿ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡ ಸವಾರ ಮೃತಪಟ್ಟಿರುತ್ತಾರೆ. ಸುಬ್ರಮಣ್ಯ (46) ಎಂಬುವವರು ಮಧ್ಯಾಹ್ನ 2 ಗಂಟೆಗೆ ಬೈಕ್‌ನಲ್ಲಿ (KA-20- EN-9936) ನಕ್ರೆ ಜಂಕ್ಷನ್‌ನತ್ತ ಬರುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಎಡಬದಿಯಲ್ಲಿರುವ ಚರಂಡಿಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕಾರ್ಕಳ ಟಿ.ಎಂ.ಎ. ಪೈ ಆಸ್ಪತ್ರೆಗೆ ದಾಖಲಿಸಿದ್ದು ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆಗಾಗಲೇ ಸುಬ್ರಹ್ಮಣ್ಯ ಅವರು ಕೊನೆಯುಸಿರೆಳೆದಿದ್ದರು. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.







































error: Content is protected !!
Scroll to Top