ಸಂಘಟನೆಯೇ ಯಶಸ್ಸಿನ ಕೀಲಿ ಕೈ : ಜನನಿ ದಿವಾಕರ ಶೆಟ್ಟಿ
ಕಾರ್ಕಳ : ಸಾಮಾಜಿಕ ವ್ಯವಸ್ಥೆಯಲ್ಲಿ ಸಹಬಾಳ್ವೆ ಮತ್ತು ಸಂಘಟನೆಗೆ ಮಹತ್ವದ ಸ್ಥಾನವಿದೆ. ಸಮಾಜದ ವ್ಯಕ್ತಿಗಳೆಲ್ಲರು ಒಂದು ನಿರ್ದಿಷ್ಟ ಆಶಯದಡಿಯಲ್ಲಿ ಸಂಘಟನೆಯಾದರೆ ಅದೇ ಅವರ ಯಶಸ್ಸಿನ ಕೀಲಿ ಕೈ ಎಂದು ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಜನನಿ ದಿವಾಕರ ಜೆ. ಶೆಟ್ಟಿ ಹೇಳಿದರು. ಅವರು ನ.1 ರಂದು ಆನೆಕೆರೆಯ ಶ್ರೀ ಕೃಷ್ಣ ಕ್ಷೇತ್ರದ ಸಮುದಾಯ ಭವನದಲ್ಲಿ ನೆಡೆದ ಜಯಕರ್ನಾಟಕ ಜನಪರ ವೇದಿಕೆಯ ಆಟೋ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಜನರು ಒಂದು ನಿರ್ದಿಷ್ಟ ಉದ್ದೇಶದಡಿಯಲ್ಲಿ ಸಮಾಜದ ಏಳಿಗೆಗಾಗಿ ಸಂಘಟಕರಾದಾಗ ಅವರ ನಡುವಿನ ಸಹಕಾರ ಸಂಘಟನಾ ಮನೋಭಾವವೇ ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್. ರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಮಹಾಪ್ರದಾನ ಸಂಚಾಲಕ ಶೆ.ಬೊ ರಾಧಾಕೃಷ್ಣ, ರಾಜ್ಯ ಸಹ ಸಂಚಾಲಕ ರಾಮದಾಸ್ ಶೆಟ್ಟಿ, ಜಿಲ್ಲಾ ಕಾರ್ಯಧ್ಯಕ್ಷ ತಿಂಗಳೆ ಧೀರಜ್ ಶೆಟ್ಟಿ ಉಪಸ್ಥಿತರಿದರು.
ಗೌರವ ಸನ್ಮಾನ:
ಸಮಾಜ ಸೇವೆಯಲ್ಲಿ ನಿರತರಾಗಿರುವ ಡಿ.ಅರ್.ರಾಜು, ತಿಂಗಳೆ ಧೀರಜ್ ಶೆಟ್ಟಿ, ಅನಿತಾ ಡಿ ಸೋಜ ಅವರನ್ನು ಸನ್ಮಾನಿಸಲಾಯಿತು. ಹಾಗೂ ವಿದ್ಯಾರ್ಥಿಗಳಿಗೆ ಗೌರವ ಧನ ವಿತರಣೆ ಮಾಡಲಾಯಿತು.
ಪದಗ್ರಹಣ:
ನೂತನ ಗೌರವಧ್ಯಕ್ಷ ಉದಯ ವಿ. ಶೆಟ್ಟಿ, ಅಧ್ಯಕ್ಷ ಉಮರಬ್ಬ, ಕಾರ್ಯ್ಯಧ್ಯಕ್ಷ ರವಿ ಪೂಜಾರಿ ಆನೆ ಕೆರೆ, ಸಂಚಾಲಕರಾಗಿ ನಾಗೇಶ್ ಹೆಗ್ಡೆ, ಕಾರ್ಯದರ್ಶಿಗಳಾದ ಮುಕೇಶ್, ರಾಜೇಶ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಮುರಳಿ ಮಾರ್ಕೆಟ್, ಅಮಿತ್ ಶೆಟ್ಟಿ ಅಯ್ಯಪ್ಪ ನಗರ ಮತ್ತಿತರರ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿತು. ಆನೆಕೆರೆ ನಾಗೇಶ್ ಹೆಗ್ಡೆ ಸ್ವಾಗತಿಸಿ, ಕಾನೂನು ಸಲಹೆಗಾರ ರತನ್ ಕುಮಾರ್ ಪ್ರಸ್ತಾವಿಕ ಮಾತುಗಳನ್ನಾಡಿದರು. ನಿಖಿತಾ ಪೂಜಾರಿ ನಿರೂಪಿಸಿದರು.