ಪ್ರಧಾನಿ ಭಾಷಣ ಮಾಡುತ್ತಿರುವಾಗಲೇ ಉದ್ದೇಶಪೋರ್ವಕವಾಗಿ ಬೋಲ್ಟ್ ಕಿತ್ತುಹಾಕಿದ
ಗಾಂಧಿನಗರ : ಗುಜರಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವಾಗಲೇ ಸಾರ್ವಜನಿಕರಿಗಾಗಿ ಹಾಕಿದ್ದ ಪೆಂಡಾಲ್‌ನ ಬೋಲ್ಟ್ ಕಳಚಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅ.31ರಂದು ಥರಾಡ್‌ನಲ್ಲಿ ನಡೆದ ಸಾರ್ವಜನಿಕ ಸಭೆಯ ವಿಡಿಯೋ ವೈರಲ್ ಆಗಿತ್ತು. ಒಂದು ಕಡೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದರೆ, ಸಭಿಕರ ಮಧ್ಯೆ ಕುಳಿತಿದ್ದ ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ಬೃಹತ್ ಚಪ್ಪರದ ಬೋಲ್ಟ್ ಅನ್ನು ಬಿಚ್ಚಿ ತೆಗೆಯುತ್ತಿರುವುದು ವಿಡಿಯೋದಲ್ಲಿ ಗೋಚರಿಸುತ್ತಿತ್ತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ನಂತರ ಬನಸ್ಕಾಂತ ಪೊಲೀಸರು ಕಾರ್ಯಾಚರಣೆಗೆ ಇಳಿದು ವೀಡಿಯೊದಲ್ಲಿ ನೋಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಥರಾಡ್ ಗ್ರಾಮದ ನಿವಾಸಿ ಎಂದು ಗೊತ್ತಾಗಿದೆ. ಆತ ಬೋಲ್ಟ್ ಕಳಚಿದ ಉದ್ದೇಶವೇನು ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಆತ ಬೇರೊಂದು ಪಕ್ಷದ ಕಾರ್ಯಕರ್ತ ಎಂಬ ಗುಮಾನಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.