Saturday, December 10, 2022
spot_img
Homeಸುದ್ದಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳ ಸಭೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪದಾಧಿಕಾರಿಗಳ ಸಭೆ

ಕಾರ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕಾರ್ಕಳ ತಾಲೂಕು ಬೈಲೂರು ವಲಯದ ಪದಾಧಿಕಾರಿಗಳ ಸಭೆ ಬೈಲೂರು ಮಾರಿಯಮ್ಮ ಸಮುದಾಯ ಭವನದಲ್ಲಿ ವಲಯ ಅಧ್ಯಕ್ಷ ಪ್ರೇಮ್‌ಕುಮಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಶಿವರಾಯ ಪ್ರಭು ದೀಪ ಬೆಳಗಿ ಉದ್ಘಾಟಿಸಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆಗೆ ಪುಷ್ಪ ಹಾಕುವುದರ ಮೂಲಕ ಗೌರವಾರ್ಪಣೆ ಮಾಡಲಾಯಿತು. ಕ್ಷೇತ್ರದ ಹಿನ್ನಲೆ ಬಗ್ಗೆ, ಯೋಜನೆಯು ನಡೆದು ಬಂದ ದಾರಿಯ ಬಗ್ಗೆ, ಪದಾಧಿಕಾರಿಗಳ ಕರ್ತವ್ಯ, ಯೋಜನೆಯ ನಿಯಮಗಳ ಬಗ್ಗೆ ತರಬೇತಿಯನ್ನು ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ನೀಡಿದರು.
ಯೋಜನಾಧಿಕಾರಿ ಭಾಸ್ಕರ್ ವಿ. ಯೋಜನೆಯ ಹೊಸ ಕಾರ್ಯಕ್ರಮಗಳಾದ ಇಎಸ್‌ಸಿ ಬಗ್ಗೆ ಬಡ್ಡಿ ಹಾಗೂ ಸಂಘದಲ್ಲಿ ಸದಸ್ಯರ ಜವಾಬ್ದಾರಿ ಹೇಗಿರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು. ದಾಖಲಾತಿ ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ, ಲೆಕ್ಕ ಪರಿಶೋಧನೆ ಬಗ್ಗೆ ಕಾರ್ಕಳ ತಾಲೂಕು ಆಂತರಿಕ ಲೆಕ್ಕ ಪರಿಶೋಧಕ ಜಯಾನಂದ್ ಮಾಹಿತಿ ನೀಡಿದರು. ವಲಯದ ಮೇಲ್ವಿಚಾರಕಿ ಸೌಮ್ಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ವಿಜಯ ವಂದಿಸಿದರು. ಎರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಪೂಜಾರಿ, ನೀರೆ A ಒಕ್ಕೂಟದ ಅಧ್ಯಕ್ಷ ಕೆ. ಎಸ್. ದಿನೇಶ್ ಆಚಾರ್ಯ, ಹಾಗೂ 9 ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!