ಕಾರ್ಕಳ: ನ.1ರಂದು ಪ್ರಕೃತಿ ಸಮೂಹ ಸಂಸ್ಥೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು. ಸಂಸ್ಥೆಯ ಆಡಳಿತ ನಿರ್ದೇಶಕ ಅಶೋಕ ಕುಮಾರ್ ಮಾತನಾಡಿ ಕನ್ನಡ ಭಾಷೆಯನ್ನು ಪ್ರೀತಿಸೋಣ, ಗೌರವಿಸೋಣ ಎನ್ನುತ್ತಾ ಕನ್ನಡ ಮಾತಾನಾಡುವುದೇ ನಮ್ಮೆಲ್ಲರ ಹೆಮ್ಮೆ ಎಂದು ಶುಭ ಹಾರೈಸಿದರು.
ಕನ್ನಡಾಂಬೆಯ ಭಾವ ಚಿತ್ರ ಕೊಡುಗೆ:
ಸಂಸ್ಥೆಯ ಕನ್ನಡ ಶಿಕ್ಷಕ ವೃಂದದವರು ನೆನಪಿನ ದ್ಯೋತಕವಾಗಿ ಕನ್ನಡಾಂಬೆಯ ಭಾವ ಚಿತ್ರವನ್ನು ಸಂಸ್ಥೆಗೆ ಕೊಡುಗೆಯಾಗಿ ನೀಡಿದರು. ವಿದ್ಯಾರ್ಥಿಗಳು ನೃತ್ಯ, ನಾಟಕದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಕು.ಮಮತ ಶರ್ಮ, ಪ್ರಕೃತಿ ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲ ಶ್ರೀಪ್ರಸಾದ್, ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಕು.ವಿನ್ಯಾ ಉಪಸ್ಥಿತರಿದ್ದರು. ಕು. ಲವಿಟಾ ಸ್ವಾಗತಿಸಿದರು. ವಿದ್ಯಾರ್ಥಿ ದೀಕ್ಷಿತ್ ಕಾರ್ಯಕ್ರಮವನ್ನು ನಿರೂಪಿಸಿ, ಪ್ರಸಿದ್ಧ ವಂದಿಸಿದರು.