Saturday, December 10, 2022
spot_img
Homeಸುದ್ದಿಇನ್ವೆಸ್ಟ್‌ ಕರ್ನಾಟಕ ಹೂಡಿಕೆ ಸಮಾವೇಶಕ್ಕೆ ಇಂದು ಮೋದಿ ಚಾಲನೆ

ಇನ್ವೆಸ್ಟ್‌ ಕರ್ನಾಟಕ ಹೂಡಿಕೆ ಸಮಾವೇಶಕ್ಕೆ ಇಂದು ಮೋದಿ ಚಾಲನೆ

ರಾಜ್ಯಕ್ಕೆ 5 ಲಕ್ಷ ಕೋ.ರೂ. ಬಂಡವಾಳ ತರುವ ಗುರಿ

ಬೆಂಗಳೂರು: ಇಂದಿನಿಂದ ತೊಡಗಿ ಮೂರು ದಿನ ಬೆಂಗಳೂರಿನಲ್ಲಿ ನಡೆಯಲಿರುವ ಇನ್ವೆಸ್ಟ್​ ಕರ್ನಾಟಕ-2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಲಿದ್ದಾರೆ.
ಇಂದು ಬೆಳಿಗ್ಗೆ ವರ್ಚುವಲ್ ಮೂಲಕ ಮೋದಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಸಮಾವೇಶದಲ್ಲಿ ರಾಜ್ಯವು ರೂ.5 ಲಕ್ಷ ಕೋಟಿ ಹೂಡಿಕೆಯ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.
ಸಮಾವೇಶಕ್ಕೆ ಚಾಲನೆ ನೀಡುವ ಕುರಿತು ಮಾಹಿತಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಇಂದು ಬೆಳಿಗ್ಗೆ 10.30ಕ್ಕೆ ಇನ್ವೆಸ್ಟ್ ಕರ್ನಾಟಕ 2022ಕ್ಕೆ ಚಾಲನೆ ನೀಡಲಿದ್ದೇನೆ. ಇದು ಜಾಗತಿಕ ಹೂಡಿಕೆದಾರರ ಸಭೆಯಾಗಿದ್ದು, ಕರ್ನಾಟಕದ ಸಂಭಾವ್ಯ ಕೊಡುಗೆಗಳನ್ನು ಪ್ರದರ್ಶಿಸುತ್ತದೆ. ಸ್ಟಾರ್ಟ್‌ಅಪ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕರ್ನಾಟಕದ ದಾಪುಗಾಲು ಜಾಗತಿಕ ಗಮನವನ್ನು ಸೆಳೆಯಲಿದೆ ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ ಕರ್ನಾಟಕದ ರಾಜ್ಯಪಾಲರು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸಚಿವರಾದ ಪಿಯೂಷ್‌ ಗೋಯೆಲ್‌, ಪ್ರಹ್ಲಾದ್‌ ಜೋಶಿ, ಸ್ಮೃತಿ ಇರಾನಿ, ರಾಜೀವ್‌ ಚಂದ್ರಶೇಖರ್‌, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ ಹಾಗೂ ಖ್ಯಾತ ಉದ್ಯಮಿಗಳು ಭಾಗಿಯಾಗಲಿದ್ದಾರೆ. ನವೆಂಬರ್ 4ರಂದು ಸಮಾರೋಪದಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!