ನ.3ರಂದು ಸಚಿವ ವಿ. ಸುನೀಲ್‌ ಕುಮಾರ್‌ ಪ್ರವಾಸದ ವಿವರ

ಕಾರ್ಕಳ : ದ.ಕ.ಜಿಲ್ಲಾ ಉಸ್ತುವಾರಿ ಮತ್ತು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಅವರು ನ.3 ರಂದು ಕೈಗೊಳ್ಳಲಿರುವ ಪ್ರವಾಸದ ವಿವರ ಇಂತಿದೆ. ಬೆಳಿಗ್ಗೆ ಗಂಟೆ 10ಕ್ಕೆ ಕಾರ್ಕಳದಿಂದ ಮಂಗಳೂರಿಗೆ ರಸ್ತೆ ಮೂಲಕ ಪ್ರಯಾಣಿಸಲಿದ್ದು, 11ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜರುಗುವ ಅಂತರಾಷ್ಟ್ರೀಯ ಸ್ಕೌಟ್-ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲಿರುವರು. ಮಧ್ಯಾಹ್ನ 3ಕ್ಕೆ ಶಿವಪುರ ಕೈರಬೆಟ್ಟು ಗೋಶಾಲೆ ಅಭಿವೃದ್ಧಿ ಬಗ್ಗೆ ಸಭೆ, 4ಕ್ಕೆ ಗಿಲ್ಲಾಳಿ ಹೆಬ್ರಿಯ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆ ಭೇಟಿ, 4.30ಕ್ಕೆ ಮುದ್ರಾಡಿಯಲ್ಲಿ ಹೆಬ್ರಿ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಸಭೆ, ಸಂಜೆ 5.30ಕ್ಕೆ ಅಜೆಕಾರಿನಲ್ಲಿ ಮರ್ಣೆ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಸಭೆಯಲ್ಲಿ ಪಾಲ್ಗೊಳ್ಳಲಿರುವರು ಎಂದು ಸಚಿವರ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.

Latest Articles

error: Content is protected !!