300 ಕೋ.ರೂ. ಕ್ಲಬ್‌ಗೆ ಕಾಂತಾರ

ಮುಂದುವರಿದ ಯಶಸ್ಸಿನ ನಾಗಾಲೋಟ

ಬೆಂಗಳೂರು : ಕಾಂತಾರ ಸಿನಿಮಾ 300 ಕೋಟಿ ರೂ. ಕ್ಲಬ್‌ಗೆ ಸೇರಿದ ಟಪರೂಪದ ದಾಖಲೆ ಮಾಡಿದ.ಕಳೆದ ಸೆ.30ರಂದು ಬಿಡುಗಡೆಯಾಗಿರುವ ರಿಷಬ್‌ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಇಷ್ಟರ ತನಕ 300 ಕೋ.ರೂ. ಕಲೆಕ್ಷನ್ ಮಾಡಿದೆ ಹಾಗೂ ಚಿತ್ರದ ಯಶಸ್ಸಿನ ನಾಗಾಲೋಟ ಮುಂದುವರಿದಿದೆ.
ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯ ಚಲನಚಿತ್ರವನ್ನಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದೆ.
ಕಳೆದ ತಿಂಗಳು 25 ದಿನಗಳಲ್ಲಿ 77 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಖಲಿಸುವ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
300 ಕೋಟಿಯಲ್ಲಿ ಕರ್ನಾಟಕದಲ್ಲಿ ಅರ್ಧದಷ್ಟುಗಳಿಕೆ ಕರ್ನಾಟಕದಲ್ಲೇ ಆಗಿದೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಮೂಲಕ ತಮಿಳುನಾಡಿನಲ್ಲಿ ಚಿತ್ರವನ್ನು ವಿತರಿಸಿರುವ ನಿರ್ಮಾಪಕ ಎಸ್‌.ಆರ್. ಪ್ರಭು ಅವರು ಅಕ್ಟೋಬರ್ 30ರಂದು ಚಿತ್ರವು ತನ್ನ ಅತ್ಯಧಿಕ ಕಲೆಕ್ಷನ್‌ಗಳನ್ನು ದಾಖಲಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
2022ರಲ್ಲಿ 300 ಕೋಟಿ ಕ್ಲಬ್ ಸೇರಿದ 7ನೇ ಸಿನೆಮಾ ಕಾಂತಾರ. 50 ದಿನಗಳತ್ತ ಮುನ್ನುಗ್ಗುತ್ತಿರುವ ಕಾಂತಾರ ಗುಂಗು ಮಾತ್ರ ಕಮ್ಮಿಯಾಗಿಲ್ಲ.

Latest Articles

error: Content is protected !!