ಜಿಲ್ಲಾ ಮಟ್ಟದ ಮಕ್ಕಳ ಸಂಸತ್ತು : ಭುವನೆಂದ್ರ ಪ್ರೌಢಶಾಲೆಯ ಸಿದ್ಧಿರಾಜ್ ಡಿ. ಶೆಟ್ಟಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕಾರ್ಕಳ : ರಜತಾದ್ರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಅ. 29ರಂದು ಜಿಲ್ಲಾ ಮಟ್ಟದ ಮಕ್ಕಳ ಸಂಸತ್ತು ಕಾರ್ಯಕ್ರಮ ಜರಗಿದ್ದು, ಜನಪ್ರತಿನಿಧಿ ಹಾಗೂ ಅಧಿಕಾರಿಗಳೊಂದಿಗೆ ನಡೆದ ಮಕ್ಕಳ ಮುಖಾಮುಖಿ ಸಂವಾದದಲ್ಲಿ ಕಾರ್ಕಳ ಶ್ರೀ ಭುವನೇಂದ್ರ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿಭಾಗದ 8 ನೇ ತರಗತಿ ವಿದ್ಯಾರ್ಥಿ ಸಿದ್ಧಿರಾಜ್ ಡಿ. ಶೆಟ್ಟಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ಶಾಲೆಯ 10ನೇ ತರಗತಿಯ ಅನ್ನಪೂರ್ಣ ಕಾಮತ್ ತೃತೀಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಪ್ರಥಮ ಸ್ಥಾನಿಯಾಗಿರುವ ಸಿದ್ದಿರಾಜ್‌ ಮುಖ್ಯಮಂತ್ರಿಯೊಂದಿಗೆ ನಡೆಯುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಿದ್ದಿರಾಜ್‌ ಶಿಕ್ಷಕರಾದ ದಿನೇಶ್‌ ಹಾಗೂ ಪ್ರಮೀಳಾ ಶೆಟ್ಟಿ ದಂಪತಿ ಪುತ್ರ. ಅನ್ನಪೂರ್ಣ ಸರ್ವತ್ತೋಮ ಎನ್.‌ ಕಾಮತ್‌ ಹಾಗೂ ಪದ್ಮ ಎಸ್.‌ ಕಾಮತ್‌ ದಂಪತಿ ಪುತ್ರಿ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ, ಕುಂದಾಪುರ ಉಡುಪಿ ಪಡಿ ಸಂಸ್ಥೆ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ ಉಡುಪಿ, ಚೈಲ್ಡ್ ಕೈಂಡ್ ಹಾರ್ಟ್ ಟ್ರಸ್ಟ್‌ ಬಾಳ್ಕುದ್ರು ಬ್ರಹ್ಮಾವರ, ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟ್ ಸೊಸೈಟಿ, ಉಡುಪಿ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಜರಗಿತು. ಕಾರ್ಕಳ ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯ ಆಡಳಿತ ಮಂಡಳಿ ಮುಖ್ಯೋಪಾಧ್ಯಾಯಿನಿ ಶಿಕ್ಷಕ ಬಂಧುಗಳು ಶಿಕ್ಷಕೇತರ ಬಂಧುಗಳು ಹಾಗೂ ವಿದ್ಯಾರ್ಥಿಗಳು ಶುಭಾಶಯ ಕೋರಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.













































error: Content is protected !!
Scroll to Top