Thursday, December 1, 2022
spot_img
HomeUncategorizedನಲ್ಲೂರು ಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾ ಶೆಣೈ ನಿವೃತ್ತಿ - ಅಭಿನಂದನೆ

ನಲ್ಲೂರು ಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾ ಶೆಣೈ ನಿವೃತ್ತಿ – ಅಭಿನಂದನೆ

ಕಾರ್ಕಳ : ಕಳೆದ 9 ವರ್ಷಗಳಿಂದ ಪರಪಾಡಿ ನಲ್ಲೂರು ಶಾಲಾ ಮುಖ್ಯಶಿಕ್ಷಕಿಯಾಗಿದ್ದ ಕಾರ್ಕಳದ ಪೂರ್ಣಿಮಾ ಶೆಣೈ ಅವರು ಅ. 31ರಂದು ಸೇವಾ ನಿವೃತ್ತಿ ಹೊಂದಿದರು. 1982ರಲ್ಲಿ ಹೊಸ್ಮಾರು ಶಾಲೆಗೆ ಗೌರವ ಶಿಕ್ಷಕಿಯಾಗಿ ಸೇರ್ಪಡೆಗೊಂಡ ಪೂರ್ಣಿಮಾ ಅವರು ಬಳಿಕ ಜೇಸಿಸ್‌ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. 1998ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದುರ್ಗಾ ಇಲ್ಲಿಗೆ ಶಿಕ್ಷಕಿಯಾಗಿ ನೇಮಕಗೊಂಡ ಅವರು ಅನಂತರ 8 ವರ್ಷಗಳ ಕಾಲ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದರು. ಪೂರ್ಣಿಮಾ ಅವರು ಸಾಮಾಜಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಅವರ ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಒಲಿದಿತ್ತು. ವಿವಿಧ ಸಂಘ ಸಂಸ್ಥೇಗಳು ಗುರುತಿಸಿ ಪುರಸ್ಕರಿಸಿತ್ತು.

ಬೀಳ್ಕೊಡುಗೆ
ನಿವೃತ್ತಿ ಹೊಂದಿರುವ ಶಿಕ್ಷಕಿ ಪೂರ್ಣಿಮಾ ಅವರನ್ನು ಶಾಲಾಭಿವೃದ್ಧಿ ಸಮಿತಿ, ಯುವ ಚೇತನ ಯುವಕ ಸಂಘ, ಹಳೆ ವಿದ್ಯಾರ್ಥಿ ಸಂಘ, ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದರು. ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ಮೈಸೂರು ಪೇಟ, ಶಾಲು ಹೊದಿಸಿ ಸನ್ಮಾನಿಸಿದರು. ನಲ್ಲೂರು ಗ್ರಾ.ಪಂ. ಅಧ್ಯಕ್ಷೆ ಕವಿತಾ, ಶಾಲಾಭಿವೃ‍ದ್ಧಿ ಸಮಿತಿ ಅಧ್ಯಕ್ಷ ಶ್ರೇಯಾಂಸ ಜೈನ್‌, ಯುವ ಚೇತನ ಯುವಕ ಸಂಘದ ಅಧ್ಯಕ್ಷ ಪ್ರಮೋದ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಪ ಪೂಜಾರಿ, ಊರ ಹಿರಿಯರಾದ ಕೃಷ್ಣ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಗಾಯತ್ರಿ ಪ್ರಭು, ಶೋಭಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಒಕ್ಕೂಟದ ವನಿತಾ ಪೂಜಾರಿ, ಶಿಕ್ಷಕಿ ವಿದ್ಯಾ ಉಪಸ್ಥಿತರಿದ್ದರು. ಶಿಕ್ಷಕಿ ಕಾವ್ಯ ಶೆಟ್ಟಿ ಸ್ವಾಗತಿಸಿ, ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಜೈನ್ ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!