Thursday, December 1, 2022
spot_img
Homeಸುದ್ದಿಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ

ದೇಶಾದ್ಯಂತ ಇಂದಿನಿಂದಲೇ ಹೊಸ ಬೆಲೆ ಜಾರಿ

ಹೊಸದಿಲ್ಲಿ : ಬಹಳ ದಿನಗಳ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಇಳಿಕೆಯಾಗಿದೆ. ನವೆಂಬರ್ 1ರಿಂದಲೇ ಹೊಸ ದರ ಜಾರಿಗೆ ಬರಲಿದೆ.
ಕಳೆದ ಮೇ 22 ರಂದು ಕೇಂದ್ರ ಸರ್ಕಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು. ಇದಾದ ನಂತರ ಇದೀಗ 40 ಪೈಸೆಯಷ್ಟು ಬೆಲೆ ಇಳಿಕೆ ಮಾಡಿದ್ದು ನವೆಂಬರ್ 1ರ ಬೆಳಗ್ಗೆ 6 ಗಂಟೆಯಿಂದ ಹೊಸ ಬೆಲೆ ಜಾರಿಗೆ ಬರಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯೂ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ದರ 101.92 ರೂಪಾಯಿ ಇದ್ದು ನಾಳೆಯಿಂದ 101.52 ರೂಪಾಯಿ ಆಗಲಿದೆ. ಡೀಸಿಲ್‌ ಬೆಲೆ 87.89 ರೂಪಾಯಿ ಆಗಿದ್ದು ನಾಳೆ 87.47 ರೂಪಾಯಿ ಆಗಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!