Saturday, December 10, 2022
spot_img
Homeಸ್ಥಳೀಯ ಸುದ್ದಿಎಂ. ಪಿ. ಎಂ.ನಲ್ಲಿ ಕನ್ನಡ ರಾಜ್ಯೋತ್ಸವ : ಕನ್ನಡವನ್ನು ಬಳಸಿ ಉಳಿಸಿ : ಜಾರ್ಜ್...

ಎಂ. ಪಿ. ಎಂ.ನಲ್ಲಿ ಕನ್ನಡ ರಾಜ್ಯೋತ್ಸವ : ಕನ್ನಡವನ್ನು ಬಳಸಿ ಉಳಿಸಿ : ಜಾರ್ಜ್ ಕ್ಯಾಸ್ತಾಲಿನೋ ಕರೆ

ಕಾರ್ಕಳ : ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನೇರವೇರಿತು. ಮುಖ್ಯ ಅತಿಥಿಯಾಗಿ ಆಗಮಿಸಿದ , ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಜಾರ್ಜ್ ಕ್ಯಾಸ್ತಾಲಿನೋ ದ್ವಜಾರೋಹಣ ಮಾಡಿ, ಕರ್ನಾಟಕ ರಾಜ್ಯದ ಉದಯ, ಇತಿಹಾಸ ಮತ್ತು ನಿತ್ಯ ಕನ್ನಡ ದಿನಪತ್ರಿಕೆಯನ್ನು ಓದುವುದರ, ಕನ್ನಡವನ್ನು ಬಳಸುವ ಮೂಲಕ ಕನ್ನಡವನ್ನು ಉಳಿಸಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್ ಎಂ. ತಮ್ಮ ವಿದ್ಯಾರ್ಥಿ ಜೀವನದ ಅನುಭವವನ್ನು ಮತ್ತು ಕನ್ನಡ ಹಳ್ಳಿಯಿಂದ ದಿಲ್ಲಿಯವರೆಗೆ ಪಸರಿಸಿದೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದರು.
ವಿದ್ಯಾರ್ಥಿಗಳು ಕನ್ನಡದ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಯೋಗೀಶ್ ಡಿ. ಎಚ್. ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!