Saturday, December 10, 2022
spot_img
Homeಸುದ್ದಿಕೆಎಸ್‌ಆರ್‌ಟಿಸಿಯಲ್ಲಿ 30 ಕೆಜಿಗಿಂತ ಹೆಚ್ಚು ಲಗೇಜ್‌ ಸಾಗಿಸಿದರೆ ಟಿಕೆಟ್‌ ತೆಗೆದುಕೊಳ್ಳಬೇಕು

ಕೆಎಸ್‌ಆರ್‌ಟಿಸಿಯಲ್ಲಿ 30 ಕೆಜಿಗಿಂತ ಹೆಚ್ಚು ಲಗೇಜ್‌ ಸಾಗಿಸಿದರೆ ಟಿಕೆಟ್‌ ತೆಗೆದುಕೊಳ್ಳಬೇಕು

ನಾಯಿಗೂ ಇದೆ ಅರ್ಧ ಟಿಕೆಟ್‌

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಗೇಜು ಸಾಗಾಣೆಯ ನಿಯಮಗಳು ಮಾರ್ಪಾಡು ಮಾಡಲಾಗಿದ್ದು, ಅದರಂತೆ ನಾಯಿಯನ್ನು ಕೊಂಡೊಯ್ಯಲು ಒಬ್ಬ ವಯಸ್ಕ ಪ್ರಯಾಣಿಕ ಎಂದು ಪರಿಗಣಿಸಿ ವಿಧಿಸಲಾಗುತ್ತಿದ್ದ ದರದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನುಮುಂದೆ ನಾಯಿ ಮತ್ತು ನಾಯಿಯ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸಲು ನಿರ್ಧರಿಸಲಾಗಿದೆ.
ಪ್ರಯಾಣಿಕರು ನಾಯಿಯ ಮೇಲೆ ವಿಧಿಸುವ ಟಿಕೆಟ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡ್ತಿದ್ರು, ಈ ಒತ್ತಡಕ್ಕೆ ಮಣಿದ ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಸಾಮಾನ್ಯ ವೇಗದೂತ, ನಗರ ಹೊರವಲಯ ಬಸ್‌ಗಳಲ್ಲಿ ನಾಯಿ ಸಾಗಾಣಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಬಸ್‌ನಲ್ಲಿ ಯದ್ವಾತದ್ವಾ ಲಗೇಜ್ ಸಾಗಾಣಿಕೆಗೆ ಬ್ರೇಕ್ ಹಾಕಲಾಗಿದೆ. ಪ್ರತಿ ಪ್ರಯಾಣಿಕರ 30 ಕೆಜಿ ಲಗೇಜ್ ಕೊಂಡೊಯ್ಯಲು ಅವಕಾಶವಿದ್ದು, 30 ಕೆಜಿಗಿಂತ ಹೆಚ್ಚು ಸಾಗಾಣಿಕೆಗೆ ಹೆಚ್ಚುವರಿ ದರ ವಿಧಿಸಲು ಕೆಎಸ್‌ಆರ್‌ಟಿಸಿ ಆದೇಶಿಸಿದೆ.
ವೈಯಕ್ತಿಕವಾಗಿ ಕೊಂಡೊಯ್ಯುವ ಲಗೇಜ್​ ತೂಕ 30 ಕೆಜಿವರೆಗೆ ಯಾವುದೇ ದರ ವಿಧಿಸುತ್ತಿಲ್ಲ. ಬ್ಯಾಗ್​, ಸೂಟ್​ಕೇಸ್​, ಕಿಟ್‌ಬ್ಯಾಗ್​ ದಿನಸಿ, ಅಕ್ಕಿ, ತೆಂಗಿನಕಾಯಿ, ರಾಗಿ, ಅಕ್ಕಿ ಹಿಟ್ಟು, ತರಕಾರಿ, ಹೂ ಹಣ್ಣು, ಸೀಲಿಂಗ್​ ಫ್ಯಾನ್​, ಒಂದು ಮಿಕ್ಸರ್​ ಗ್ರೈಂಡರ್​ ಬಾಕ್ಸ್​ ಇತ್ಯಾದಿ ವಸ್ತುಗಳು 30 ಕೆಜಿ ಒಳಗೆ ಪರಿಗಣಿಸಲಾಗುತ್ತದೆ. ಲಗೇಜ್​ 30 ಕೆಜಿ ಮೀರಿದರೆ ಅದರ ಮೇಲೆ ನಿಯಮದ ಪ್ರಕಾರ ದರ ವಿಧಿಸಲಾಗುತ್ತದೆ. ಈ ಕುರಿತು ಕೆಎಸ್​ಆರ್​ಟಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.

LEAVE A REPLY

Please enter your comment!
Please enter your name here

Most Popular

error: Content is protected !!