Saturday, December 10, 2022
spot_img
Homeಸ್ಥಳೀಯ ಸುದ್ದಿಬಿಲ್ಲವ ಸಮುದಾಯಕ್ಕೆ ನಿಗಮ ಸ್ಥಾಪಿಸಿ : ಡಾ. ಪ್ರಣವಾನಂದ ಸ್ವಾಮೀಜಿ

ಬಿಲ್ಲವ ಸಮುದಾಯಕ್ಕೆ ನಿಗಮ ಸ್ಥಾಪಿಸಿ : ಡಾ. ಪ್ರಣವಾನಂದ ಸ್ವಾಮೀಜಿ

ಕಾರ್ಕಳ: ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ಕೋಶ ಸ್ಥಾಪಿಸಿ ಬಿಲ್ಲವ ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ಸರಕಾರ ಮಾಡುತ್ತಿದೆ. ಮೇಲ್ವರ್ಗದ ಸಮುದಾಯಗಳಂತೆ ನಮ್ಮ ಸಮಾಜಕ್ಕೂ ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪಿಸಿ 500 ಕೋಟಿ ರೂ. ಕಾದಿರಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. ಅ.31ರಂದು ಕಾರ್ಕಳದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 16 ರಾಜ್ಯಗಳಲ್ಲಿ 84 ವಿವಿಧ ಹೆಸರಿನಲ್ಲಿ ನಮ್ಮ ಸಮುದಾಯಗಳಿವೆ. ಶೇ.12ರಷ್ಟು, ದೇಶದಲ್ಲಿ ಶೇ.12ರಷ್ಟು ಕರ್ನಾಟಕದಲ್ಲಿ 70 ಲಕ್ಷ ಜನರಿದ್ದಾರೆ. ಆದರೆ ರಾಜಕೀಯವಾಗಿ ನಮಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದರು.
ಚೌಡೇಶ್ವರಿ ದೇಗುಲದ ಆಡಳಿತವನ್ನು ಮೇಲ್ವರ್ಗಕ್ಕೆ ಹುನ್ನಾರದಲ್ಲಿ ಸರಕಾರ ಮೂಗು ತೂರಿಸುತ್ತಿರುವುದು, ಬ್ರಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪನೆಗೆ ಆಸಕ್ತಿ ವಹಿಸದಿರುವುದು ಹಾಗೂ ಶೇಂದಿ ಉತ್ಪಾದನೆ ಕುರಿತಂತೆ ಸ್ಪಷ್ಟ ಕ್ರಮಕ್ಕೆ ಮುಂದಾಗದಿರುವುದು ದುರದೃಷ್ಟ ಎಂದರು.
ಬಳಿಕ ಕಾರ್ಕಳ ಬಿಲ್ಲವ ಸೇವಾ ಸಮಾಜ ಸಂಘದ ವತಿಯಿಂದ ಸ್ವಾಮೀಜಿಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್. ರಾಜು, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ, ಪುರಸಭೆ ಮಾಜಿ ಅಧ್ಯಕ್ಷ ಸುಭಿತ್ ಕುಮಾರ್, ಚಂದ್ರಹಾಸ ಸುವರ್ಣ, ರಮೇಶ್ ಪೆರ್ಲ, ಜಿತೇಂದ್ರ ಸುವರ್ಣ, ಬಿಪಿನ್‌ಚಂದ್ರಪಾಲ್ ನಕ್ರೆ, ವಸಂತ ಎಂ., ಸಂದೇಶ್, ಅಕ್ಷಯ, ಶ್ರೀಕಾಂತ್, ಸಂಪತ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!