ಕಾರ್ಕಳ : ದೇಶದ ಸಮಗ್ರತೆಗಾಗಿ ಬಲಿದಾನಗೊಂಡ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ತನ್ನ 20 ಅಂಶ ಕಾರ್ಯಕ್ರಮಗಳ ಮೂಲಕ ಈ ಮಣ್ಣಿನ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಗೆ ಹೊಸ ಆಯಾಮ ನೀಡಿದವರು. ಪ್ರಧಾನ ಮಂತ್ರಿಯಾಗಿ ಅವರು ಮಾಡಿದ ಸಾಧನೆ ವಿಶ್ವಮಾನ್ಯವಾಗಿತ್ತು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಹೇಳಿದರು.
ಅವರು ಭಾನುವಾರ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ದಿ. ಇಂದಿರಾ ಗಾಂಧಿಯವರ 38ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಾಲಿನಿ ರೈ, ಮಾಜಿ ಪುರಸಭಾ ಅಧ್ಯಕ್ಷ ಸುಬೀತ್ ಕುಮಾರ್, ಬ್ಲಾಕ್ ಪ್ರಧಾನ ಕಾರ್ಯಧರ್ಶಿಗಳಾದ ಪ್ರಭಾಕರ ಬಂಗೇರ, ಜಾಜ್೯ ಕ್ಯಾಸ್ತಲೀನೋ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಆರೀಫ್ ಕಲ್ಲೊಟ್ಟೆ, ಐಟಿ ಸೆಲ್ ಅಧ್ಯಕ್ಷ ಸತೀಶ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಾಂತಿ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಯಶೋದಾ ಆಚಾರ್ಯ, ಆಶಾ ಶೆಟ್ಟಿ, ಸುನಿಲ್ ಕೋಟ್ಯಾನ್, ಯುವ ಕಾಂಗ್ರೆಸ್ ನ ಸಾಧಿಕ್ ತೆಳ್ಳಾರು, ಆಕಾಶ್ ಪೂಜಾರಿ, ಸುನೀಲ್ ಕುಮಾರ್ ಭಂಡಾರಿ, ಶೋಭ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.