Thursday, December 1, 2022
spot_img
HomeUncategorizedಅಪರಾಧ - ಅಪಘಾತ ಪ್ರಕರಣ

ಅಪರಾಧ – ಅಪಘಾತ ಪ್ರಕರಣ

ಕಾರ್ಕಳ : ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು
ಕಾರ್ಕಳ : ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿಯೋರ್ವರು ಸಾವಿಗೀಡಾದ ದಾರುಣ ಘಟನೆ ಮಂಗಳವಾರ ಕಾರ್ಕಳ ಜೋಡುರಸ್ತೆ ಎಂಬಲ್ಲಿ ಸಂಭವಿಸಿದೆ. ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಗುಜರಿ ಹೆಕ್ಕುತ್ತಿದ್ದ ರಾಮಕೃಷ್ಣ ನಾಯ್ಕ (54) ಎಂಬವರು ಆಕಸ್ಮಿಕವಾಗಿ ತುಂಡಾಗಿ ನೇತಾಡುತ್ತಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಬಿದ್ದಿದ್ದರು. ಕೂಡಲೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಕಾರ್ಕಳ : ವಿದ್ಯಾರ್ಥಿ ನಾಪತ್ತೆ
ಕಾರ್ಕಳ : ಇಂಟರ್ನ್‌ಶಿಪ್‌ ಮಾಡಲೆಂದು ಕಾರ್ಕಳದಿಂದ ಮಂಗಳೂರಿಗೆ ತೆರಳಿದ್ದ ವಿದ್ಯಾರ್ಥಿ ನಾಪತ್ತೆಯಾದ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂಡಬಿದ್ರೆ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದ ಶ್ರೇಯಸ್‌ (23) ಅ. 31ರಂದು ಇಂಟರ್ನ್‌ಶಿಪ್ ಮಾಡಲು ಕಾರ್ಕಳದಿಂದ ಮಂಗಳೂರಿಗೆ ತೆರಳಿದ್ದು, ಸಂಜೆಯಾದರು ಮನೆಗೆ ಬಾರದೇ ಪೋನ್‌ ಕರೆ ಮಾಡದೆ ಕಾಣೆಯಾಗಿದ್ದಾರೆ.

ಅಜೆಕಾರು : ಟೆಂಪೋ ಬೈಕ್‌ಗೆ ಡಿಕ್ಕಿ
ಅಜೆಕಾರು : ಅಜೆಕಾರು ಸೇಕ್ರೆಡ್ ಹಾರ್ಟ್ ಚರ್ಚ್ ಬಳಿ ಸೋಮವಾರ ಬೈಕ್‌ಗೆ ಟೆಂಪೋ ಡಿಕ್ಕಿ ಹೊಡೆದ ಘಟನೆ ನಡೆದಿದ್ದು ಪರಿಣಾಮ ಬೈಕ್‌ ಸವಾರ ಲಾರೆನ್ಸ್ ರೂಬನ್ (23) ಗಾಯಗೊಂಡಿದ್ದಾರೆ. ಅಜೆಕಾರು ಸೆಕ್ರೇಡ್‌ ಹಾರ್ಟ್‌ ಚರ್ಚ್‌ಗೆ ತೆರಳುತ್ತಿರುವ ವೇಳೆ ರೂಬನ್‌ ಅವರ ಬೈಕ್‌ಗೆ ಕಾರ್ಕಳದಿಂದ ಅಜೆಕಾರು ಕಡೆಗೆ ಸಾಗುತಿದ್ದ ಟೆಂಪೂ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರೆನ್ಸ್‌ ರಸ್ತೆಗೆ ಬಿದ್ದು, ಗಾಯಗೊಂಡಿರುತ್ತಾರೆ. ಟೆಂಪೊ ಚಾಲಕ ದಿವಾಕರ ಎಂಬುವವರ ವಿರುದ್ಧ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!