ಗೃಹ ಬಳಕೆಯ ಸಿಲಿಂಡರ್ ಬೆಲೆ ಯಥಾಸ್ಥಿತಿ
ಹೊಸದಿಲ್ಲಿ: ಪೆಟ್ರೋಲು ಮತ್ತು ಡೀಸಿಲ್ ಬಳಿಕ ಕೇಂದ್ರ ಸರಕಾರ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನೂ ಇಳಿಸಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 116 ರೂಪಾಯಿಯಷ್ಟು ಇಳಿಕೆಯಾಗಿದ್ದು, ಹೊಸ ದರ ನ.1ರಿಂದಲೇ ಜಾರಿಗೆ ಬರಲಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದಿಲ್ಲಿಯಲ್ಲಿ 115 ರೂ., ಕೋಲ್ಕತ್ತದಲ್ಲಿ 113 ರೂ., ಮುಂಬಯಿಯಲ್ಲಿ 115 ರೂ. ಮತ್ತು ಚೆನ್ನೈಯಲ್ಲಿ 116 ರೂ.ಯಂತೆ ಇಳಿಕೆ ಮಾಡಲಾಗಿದೆ. ದೇಶಾದ್ಯಂತ ಈ ಇಳಿಕೆ ಜಾರಿಗೆ ಬರಲಿದೆ. ದರ ಪರಿಷ್ಕರಣೆಯಿಂದಾಗಿ ವಾಣಿಜ್ಯ ಸಿಲಿಂಡರ್ ಬೆಲೆ 1696ಕ್ಕೆ ಇಳಿಕೆಯಾಗಲಿದೆ.