ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು : ಅವಿಭಜಿತ ದ.ಕ., ಉಡುಪಿ ಜಿಲ್ಲೆಯ ಛಾಯಾಗ್ರಾಹಕರ ಸಂಘಟನೆಯಾದ ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಷನ್‌ಗೆ 2022ರ ಸಾಲಿನ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ. ಕಳೆದ 32 ವರ್ಷಗಳಿಂದ ವೃತ್ತಿಯೊಂದಿಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಗುರುತಿಸಿಕೊಂಡಿದೆ. ಛಾಯಾಗ್ರಾಹಕರ ಶ್ರೇಯೋಭಿವೃದ್ಧಿ, ಸಮಸ್ಯೆಗೆ ಸ್ಪಂದಿಸುತ್ತ ಬಂದಿರುವ ಈ ಸಂಘ ರಾಜ್ಯದಲ್ಲೇ ಅತ್ಯುತ್ತಮ ಛಾಯಾಗ್ರಾಹಕರ ಸಂಘಟನೆ ಎಂದು ಹೆಸರುವಾಸಿಯಾಗಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿರುವ ಈ ಸಂಘಟನೆಗೆ ಪ್ರಶಸ್ತಿ ಬಂದಿರುವುದು ಛಾಯಾಗ್ರಹಕರ ಮುಖದಲ್ಲಿ ಸಂತಸ ತಂದಿದೆ.





























































error: Content is protected !!
Scroll to Top