ಗೂಡುದೀಪ, ಮುದ್ದು ಶಾರದೆ, ಹುಲಿವೇಷ ಸ್ಪರ್ಧೆ- ಬಹುಮಾನ ವಿತರಣೆ

ಸಾಂಪ್ರದಾಯಿಕ ವಿಭಾಗದಲ್ಲಿ ರಕ್ಷಿತ್, ಆಧುನಿಕ ವಿಭಾಗದಲ್ಲಿ ವಿಠಲ್ ಭಟ್ ಮಂಗಳೂರು ಪ್ರಥಮ

ಮುದ್ದು ಶಾರದೆ- ಐಶ್ವರ್ಯ ಸುಭಾಶ್, ಹುಲಿವೇಷ- ರಕ್ಷನ್ ಬೈಲೂರು ಪ್ರಥಮ

ಕಾರ್ಕಳ: ಜ್ಯೋತಿ ಯುವಕ ಮತ್ತು ಮಹಿಳಾ ಮಂಡಲ ಸಹಭಾಗಿತ್ವದಲ್ಲಿ ನಡೆದ 5ನೇ ವರ್ಷದ ಗೂಡುದೀಪ, ಮುದ್ದುಶಾರದೆ, ಹುಲಿವೇಷ ಸ್ಪರ್ಧೆಯು ಅ.31ರಂದು ಕಾಳಿಕಾಂಬ ಜ್ಯೋತಿ ಮೈದಾನದಲ್ಲಿ ನಡೆಯಿತು.

ಸ್ಪರ್ಧೆಯ ವಿಜೇತರು:
ಮುದ್ದುಶಾರದೆ ಸ್ಪರ್ಧೆಯಲ್ಲಿ ಐಶ್ವರ್ಯ ಸುಭಾಶ್ ಪ್ರಥಮ ಸ್ಥಾನ ಪಡೆದರೆ ಆಕಾಂಕ್ಷ ಕಾಮತ್ ದ್ವಿತೀಯ ಹಾಗೂ ಪ್ರಾಚೀ ಕೋಟ್ಯಾನ್ ತೃತೀಯ ಸ್ಥಾನ ಗಳಿಸದರು. ಸ್ಪೂರ್ತಿ ರಾವ್, ಪ್ರತ್ಯೋಷಾ ನಾಯಕ್, ಮತ್ತು ತಮಿಷಾ ಪ್ರೋತ್ಸಾಹಕ ಬಹುಮಾನ ಪಡೆದರು.

ಹುಲಿವೇಷ ಸ್ಪರ್ಧೆಯಲ್ಲಿ ರಕ್ಷನ್ ಎಸ್ ಪ್ರಥಮ ಬಹುಮಾನ ಪಡದರೆ ಅಕ್ಷಯ್ ಪ್ರಭು ದ್ವಿತೀಯ, ರಾಹುಲ್ ರಾವ್ ತೃತೀಯ ಸ್ಥಾನಿಯಾದರು. ಗ್ಯಾನ್, ಜೇಷ್ಣವ್, ಮತ್ತು ಅನುರಾಗ್ ಪೂಜಾರಿ ಪ್ರೋತ್ಸಾಹಕ ಬಹುಮಾನ ಪಡೆದರು.

ಗೂಡುದೀಪ ಸ್ಪರ್ಧೆಯ ಸಾಂಪ್ರದಾಯಿಕ ವಿಭಾಗದಲ್ಲಿ- ಗೂಡು ದೀಪದಲ್ಲಿ ಶಿವಲಿಂಗ ರಚಿಸಿದ ರಕ್ಷಿತ್ ಕೋಟೆಕಣಿ ಮಂಗಳೂರು ಸತತ ಐದನೇ ವರ್ಷ ಪ್ರಥಮ ಸ್ಥಾನದ ಗೌರವಕ್ಕೆ ಪಾತ್ರರಾದರು. ಆದಿತ್ಯ ಭಟ್ ಗುರುಪುರ ದ್ವಿತೀಯ ಹಾಗೂ ರವಿರಾಜ್ ಕೋಟೇಕಾರ್ ತೃತೀಯ ಸ್ಥಾನ‌ಪಡೆದರೆ ಯಶವಂತ್ ಕಾವೂರು, ಗಣೇಶ್ ಕೊಟೇಕಾರ್, ಸಂದೇಶ್ ಶಕ್ತಿನಗರ ಪ್ರೋತ್ಸಾಹಕ ಬಹುಮಾನ ಪಡೆದರು.

ಆಧುನಿಕ ವಿಭಾಗದಲ್ಲಿ- ವಿಠಲ್ ಭಟ್ ರಥಬೀದಿ ಮಂಗಳೂರು ಇವರ ರತ್ನಗಂಧಿ ಬೀಜ ಮತ್ತು ಅದರ ಕೋಡಿನಿಂದ ತಯಾರಿಸಿದ ಗೂಡುದೀಪವು ಪ್ರಥಮ ಸ್ಥಾನವನ್ನು ಪಡೆಯಿತು. ಉಮೇಶ್ ಕುಂಜತ್ತಬೈಲು ನೂಲಿನಿಂದ ತಯಾರಿದ ಗೂಡುದೀಪ ದ್ವಿತೀಯ ಹಾಗೂ ಜಗದೀಶ್ ಅಮೀನ್‌‌ ಸುಂಕದಕಟ್ಟೆ ತರಕಾರಿ ಬೀಜಗಳಿಂದ ತಯಾರಿಸಿದ ಗೂಡುದೀಪ ತೃತೀಯ ಸ್ಥಾನ ಪಡೆದು ಜನಮೆಚ್ಚುಗೆ ಪಡೆಯಿತು. ರಕ್ಷಿತ್ ಹೊಸ್ಮಾರು, ಕೀರ್ತನ್ ಪೂಜಾರಿ, ನರಹರಿ ಶೆಣೈ ಸಾಲಿಗ್ರಾಮ ಪ್ರೋತ್ಸಾಹಕ ಪ್ರಶಸ್ತಿಯನ್ನು ಪಡೆದರು.

ಕಿಡ್ ಮಾಡೆಲ್ ಅವಾರ್ಡ್ ವಿಜೇತೆ ಕು.ಅಪೂರ್ವ ಸ್ಪರ್ಧೆಯನ್ನು ಉದ್ಘಾಟಿಸಿದ್ದರು. ಸಮಾರೋಪ ಸಮಾರಂಭದಲ್ಲಿ ನವೋದಯ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ನಿರ್ದೇಶಕ ಸುನೀಲ್ ಕುಮಾರ್ ಬಜಗೋಳಿ, ಉದ್ಯಮಿ ಉದಯ್ ಮಡಿವಾಳ್, ಯುವರಾಜ್ ಶೆಟ್ಟಿ, ನವೀನ್ ರಾವ್, ಭಾಸ್ಕರ್ ಕುಲಾಲ್, ವಿಜೇತರಿಗೆ ಚಿನ್ನದ ಪದಕ, ಶಾಶ್ವತ ಫಲಕ, ನಗದು ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಗುಣಪ್ರಕಾಶ್ ರಾವ್, ಶಿಲ್ಪಾಕಿಣಿ, ಯುವಕ ಮಂಡಲದ ನಿರ್ದೇಶಕ ರವೀಂದ್ರನಾಥ ಹೆಗ್ಡೆ, ಗೌರವಾದ್ಯಕ್ಷರಾದ ವಾಮನ್ ರಾವ್ , ಯಶ, ಅದ್ಯಕ್ಷರಾದ ನಿತೇಶ್ ಕೋಟ್ಯಾನ್, ಹರ್ಷಿಣಿ ಶೆಟ್ಟಿಗಾರ್ ಉಪಸ್ಥಿತರಿದ್ದರು, ಆಯೋಜಕ ಪುರಸಭಾ ಸದಸ್ಯ ಶುಭದರಾವ್ ಕಾರ್ಯಕ್ರಮ ನಿರ್ವಹಿಸಿದರು.

Latest Articles

error: Content is protected !!