ಪತಿಯಿಂದ ಪೊಲೀಸ್ ದೂರು ದಾಖಲು
ಸುಬ್ರಹ್ಮಣ್ಯ: ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್ ಎಂಬವರ ಪತ್ನಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ (33) ಎಂಬವರು ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.
ಭಾರತಿ ಅವರ ಪತಿ ಶಶಿಕಾಂತ್ ಅ.29ರಂದು ಮಧ್ಯಾಹ್ನ ಕೆಲಸದಿಂದ ಹಿಂದಿರುಗಿ ತಾಯಿ ಸರಸ್ವತಿ ಹಾಗೂ ಅತ್ತೆ ಭವಾನಿ ಅವರನ್ನು ಕಾಣಿಯೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧಿ ಕೊಡಿಸಿ ವಾಪಸು ಮನೆಗೆ ಬಂದಾಗ ಮನೆಯಲ್ಲಿ ಪತ್ನಿ ಇರಲಿಲ್ಲ. ಮನೆಯಲ್ಲಿದ್ದ ತಂದೆ ಹಾಗೂ ಮಕ್ಕಳಲ್ಲಿ ವಿಚಾರಿಸಿದಾಗ ಹೊರಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾರೆ ಎಂದು ಹೇಳಿದರು. ರಾತ್ರಿಯಾದರೂ ಭಾರತಿ ಮನೆಗೆ ವಾಪಸಾಗಿರಲಿಲ್ಲ. ಫೋನ್ ಸ್ವಿಚ್ಆಫ್ ಆಗಿತ್ತು. ಕೊನೆಗೆ ಶಶಿಕಾಂತ್ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪತ್ನಿ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದರು.