ಕಾರ್ಕಳ: ಕಾರ್ಕಳ ತಾಲೂಕು ಮಾಳ ಗ್ರಾಮದ ನೆಲ್ಲಿಕಟ್ಟೆ ದರ್ಖಾಸು ಮನೆಯ ನಿವಾಸಿ ಆನಂದ ಪೂಜಾರಿ (53) ಎಂಬುವವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದೇ ಇರುವುದರಿಂದ ಮತ್ತು ಒಂದು ತಿಂಗಳಿನಿಂದ ಹೊಟ್ಟೆಗೆ ಆಹಾರವನ್ನು ತಿನ್ನಲು ಸಾಧ್ಯವಾಗದಿರುವುದರಿಂದ ಮನನೊಂದು ಮನೆಯ ಪಕ್ಕಾಸಿಗೆ ಲುಂಗಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ. 31 ರಂದು ನಡೆದಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಕ್ಯಾನ್ಸರ್ ಗುಣಮುಖವಾಗದ ಹಿನ್ನಲೆ : ವ್ಯಕ್ತಿ ನೇಣಿಗೆ ಶರಣು
