ಕಾರ್ಕಳ : ಶಿರ್ಲಾಲು ಗ್ರಾಮದಲ್ಲಿ ದನಗಳ್ಳತನ

ಕಾರ್ಕಳ : ತಾಲೂಕು ಶಿರ್ಲಾಲು ಗ್ರಾಮದ ಹೈಸ್ಕೂಲ್ ಬಳಿ ಪಡಿಬೆಟ್ಟು ಎಂಬಲ್ಲಿನ ಜಯಶ್ರೀ ಪೂಜಾರಿ ಎಂಬವರ ಮನೆಯ ಹಟ್ಟಿಯಲ್ಲಿ ಮಲಗಿದ್ದ ಎರಡು ದನಗಳನ್ನು ಕಾರೊಂದರಲ್ಲಿ ತುಂಬಿಸಿಕೊಂಡು ಕಳವು ಮಾಡಿಕೊಂಡು ಹೋದ ಘಟನೆ ಅ. 30 ರ ಮಧ್ಯ ರಾತ್ರಿ 01:30 ಗಂಟೆಗೆ ನಡೆದಿದೆ. ರಸ್ತೆ ಬದಿಯಲ್ಲಿದ್ದ ಸೋಲಾರ್ ಲೈಟ್ ನಲ್ಲಿ ದನ ಕಳವು ಮಾಡಿದ ಘಟನೆ ಕಂಡಿದ್ದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಸುಮಾರು 4000 ಮೌಲ್ಯದ ದನ ಪತ್ತೆ ಹಚ್ಚಿಕೊಡಬೇಕೆಂದು ದೂರು ದಾಖಲಾಗಿದೆ.

error: Content is protected !!
Scroll to Top