Thursday, December 1, 2022
spot_img
HomeUncategorizedತಾ.ಪಂ.ನಲ್ಲಿ ಕಂದಾಯ ಮತ್ತು ಪಿಂಚಣಿ ಅದಾಲತ್‌

ತಾ.ಪಂ.ನಲ್ಲಿ ಕಂದಾಯ ಮತ್ತು ಪಿಂಚಣಿ ಅದಾಲತ್‌

ಕಾರ್ಕಳ : ಸರಕಾರಿ ಕೆಲಸವೆಂದರೆ ಬಡವರ ಸೇವೆಗೈಯಲು ದೇವರು ನೀಡಿದ ಅವಕಾಶ. ಹಾಗಾಗಿ ಸರಕಾರಿ ಅಧಿಕಾರಿ, ಸಿಬ್ಬಂದಿ ವರ್ಗ ಬದ್ಧತೆ, ಪ್ರಾಮಾಣಿಕತೆಯೊಂದಿಗೆ ಕಾರ್ಯನಿರ್ವಹಿಸಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ, ಸರಕಾರಿ ಸವಲತ್ತು ಒದಗಿಸಿಕೊಡಬೇಕೆಂದು ಉಡುಪಿ ಸಂಚಾರಿ ನ್ಯಾಯಾಲಯದ ನ್ಯಾಯಾಧೀಶ ದಿನೇಶ್‌ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಕಾನೂನು ಜಾಗೃತ ಅಭಿಯಾನ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಆಡಳಿತ ಕಂದಾಯ ಇಲಾಖೆ ಹಾಗೂ ನ್ಯಾಯವಾದಿಗಳ ಸಂಘದ ಜಂಟಿ ಸಹಯೋಗದಲ್ಲಿ ಕಾರ್ಕಳ ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಕಂದಾಯ ಮತ್ತು ಪಿಂಚಣಿ ಅದಾಲತ್‌, ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸವಲತ್ತು ವಿತರಣೆ
ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ವೃದ್ಧಾಪ್ಯ, ಮನಸ್ವಿನಿ, ರಾಷ್ಟ್ರೀಯ ಕುಟುಂಬ ಸಹಾಯ ನಿಧಿ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, 94 ಸಿ, ಹಾಗೂ 94ಸಿಸಿ ಹಕ್ಕುಪತ್ರ, ಪಡಿತರ ಚೀಟಿ, ಪೌತಿ ಖಾತೆಗಳು, ವಿವಾದಾಸ್ಪದ ಮ್ಯುಟೇಶನ್‌ ಪ್ರಕರಣ, ಪಹಣಿ ತಿದ್ದುಪಡಿಗಳು, ಪ್ರಾಕೃತಿಕ ವಿಕೋಪ ಪರಿಹಾರ, ಜಾತಿ ಆದಾಯ ದೃಢಪತ್ರ, ವಂಶವೃಕ್ಷ ದೃಢೀಕರಣ, ವಾಸ್ತವ್ಯ ದೃಢಪತ್ರ ವಿತರಿಸಲಾಯಿತು.

ಹಿರಿಯ ಸಿವಿಲ್‌ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷೆ ರೂಪಶ್ರೀ, ಪ್ರಧಾನ ಸಿವಿಲ್‌ ನ್ಯಾಯಧೀಶೆ ಚೇತನಾ ಎಸ್‌. ಎಫ್.‌, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುನೀಲ್‌ ಕುಮಾರ್‌ ಶೆಟ್ಟಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್‌ ಎಂ. ಎನ್‌. ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್‌ ಎಸ್. ಸ್ವಾಗತಿಸಿ, ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಮಹಮ್ಮದ್‌ ರಿಯಾಜ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!