ಬಿಜೆಪಿಯವರು ಬದುಕಿ ಬಾಳಬೇಕು ಆದರೆ ಅಧಿಕಾರ ತೊಲಗಬೇಕು – ಸುಧೀಂದ್ರ ಕುಮಾರ್ ಮರೋಳಿ
ಕಾರ್ಕಳ: ತಿರಂಗಾ ರ್‍ಯಾಲಿ ಮಾಡಲು ಕಾಂಗ್ರೆಸಿಗರಿಗೆ ಮಾತ್ರ ಅಧಿಕಾರವಿದೆ. ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪವಿತ್ರವಾಗಿರುವ ರಾಷ್ಟ್ರಧ್ವಜವನ್ನು 5,10 ರೂಪಾಯಿಗೊಂದು ಬಿಜೆಪಿಯವರು ಮಾರಾಟ ಮಾಡಿದ್ದರು. ಬಿಜೆಪಿಯವರು ಏನೇ ಮಾಡಿದರೂ ಅಂಬೇಡ್ಕರ್, ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಅವರ ಚಿಂತನೆಗಳೇ ಗೆಲ್ಲುವುದು. ಕೆಲವೊಂದು ಅಹಿತಕರ ಘಟನೆ ನಡೆದಾಗ ಮುಖ್ಯಮಂತ್ರಿಯವರು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳುತ್ತಾರೆ. ಇದರ ಪರಿಣಾಮವಾಗಿಯೇ ಪ್ರವೀಣ್ ನೆಟ್ಟಾರ್, ಫಾಸಿಲ್ ಕೊಲೆಯಾಯಿತು. ಕೊಲೆ ಕಾಂಗ್ರೆಸ್ ಸಂಸ್ಕೃತಿಯಲ್ಲ. ಬಿಜೆಪಿಯವರೂ ಬದುಕಿ ಬಾಳಬೇಕು. ಆದರೆ ಅಧಿಕಾರದಿಂದ ತೊಲಗಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮರೋಳಿ ಹೇಳಿದರು.
ಅ.29ರಂದು ಕಾರ್ಕಳ ಬಂಡಿಮಠದಲ್ಲಿ ಉಡುಪಿ ಯುವ ಕಾಂಗ್ರೆಸ್ ವತಿಯಿಂದ ನಡೆದ ತಿರಂಗಾ ರ್‍ಯಾಲಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ದೊಡ್ಡದಿದ್ದರೆ ರಾಷ್ಟ್ರ ಧ್ವಜ ಸಣ್ಣದಾಗಿರುತ್ತದೆ ಎಂದು ಹೇಳಿದ ಅವರು ಬಾವುಟದ ವ್ಯಾಪಾರ ಮುಗಿಸಿದ ಬಿಜೆಪಿಯವರು ಅಂಗಡಿ ಬಂದ್ ಮಾಡಿ ತೆರಳಿದರು. ಆದರೆ ನಿಜವಾದ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ಕಾಂಗ್ರೆಸಿಗರು ಎಂದರು.
ದೇಶವನ್ನು ಜಾತಿ ಮತ ಧರ್ಮದ ಹೆಸರಲ್ಲಿ ವಿಭಜಿಸುತ್ತಿರುವ ಬಿಜೆಪಿ ಘರ್ ಘರ್ ತಿರಂಗ ಹೆಸರಲ್ಲಿ ರಾಷ್ಟ ಧ್ವಜವನ್ನು ಬೀದಿಬದಿಯಲ್ಲಿ ನಿಂತು ಮಾರಿ ತನ್ನ ಖಜಾನೆ ತುಂಬಿಸಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದೆ. ಆದರೆ ನಮ್ಮ ಯುವಕರು ಬೈಕ್ ರ್‍ಯಾಲಿಯೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿ, ಈ ನಾಡಿನ ಸಮಗ್ರತೆ, ಸೌಹಾರ್ದತೆಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರೀಸ್ ನಲಪಾಡ್ ಹೇಳಿದರು. ಅಮೃತ ಮಹೋತ್ಸವವನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಅಭಿನಂದನೀಯವೆಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ, ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಲಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತಾಡಿ ಈ ಬೃಹತ್ ರ್‍ಯಾಲಿ ಆಯೋಜಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗು ಕಾರ್ಯಕರ್ತರನ್ನು ಅಭಿನಂದಿಸಿದರು.
ಸನ್ಮಾನ
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಕಾರ್ಕಳದ ಸುಬೇದಾರ್ ಭಾಸ್ಕರ್ ಪೂಜಾರಿ, ನಾಯಕ್ ಹೆನ್ರಿ ಮಿನೇಜಸ್, ಸಿಪಾಯಿ ಹೆಚ್.ಬಿ. ಹರೀಶ್, ಹವಾಲ್ದಾರ್ ಡೊಮಿನಿಕ್ ಡಿ’ಸೋಜಾ, ಡೇವಿಡ್ ಅಮ್ಮಣ್ಣ, ರಾಜೇಶ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.
ಕೆಪಿಸಿಸಿ ವಕ್ತಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, ನೆಹರೂ ಜೈಲಿನಲ್ಲಿದ್ದಾಗ ಅವರ ಹೆಂಡತಿ ಕಾಯಿಲೆಗೆ ತುತ್ತಾಗಿದ್ದರು. ಕ್ಷಮಾಪಣಾ ಪತ್ರ ನೀಡಿ ಜೈಲಿನಿಂದ ಹೊರಗಡೆ ಬರಲು ನೆಹರೂ ಅವರಿಗೆ ಅವಕಾಶವಿದ್ದರೂ ದೇಶದ ಜನತೆಗಾಗಿ ಸ್ವಾತಂತ್ರ್ಯಕ್ಕಾಗಿ ಕ್ಷಮಾಪಣಾ ಪತ್ರ ನೀಡಲಿಲ್ಲ ಎಂದರು.
ಇನ್ನಾದಲ್ಲಿ ಬೈಕ್ ರ್‍ಯಾಲಿಗೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್ ಚಾಲನೆ ನೀಡಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಪ್ರಖ್ಯಾತ್ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಹರೀಶ ಕಿಣಿ ಅಲೆವೂರು, ಕೆಪಿಸಿಸಿ ಸಂಯೋಜಕ ಅಬ್ದುಲ್ ಅಜೀಜ್ ಹೆಜ್ಮಾಡಿ, ರವಿಶಂಕರ ಶೇರಿಗಾರ್, ನವೀನ್‌ಚಂದ್ರ ಶೆಟ್ಟಿ, ಕೆಪಿಸಿಸಿ ಕಿಸಾನ್ ಘಟಕ ಕಾರ್ಯದರ್ಶಿ ಉದಯ ಶೆಟ್ಟಿ ಕುಕ್ಕುಂದೂರು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಂಗೇರ ಮತ್ತು ಸುನೀಲ್ ಕುಮಾರ್ ಭಂಡಾರಿ, ವಿವಿಧ ಬ್ಲಾಕ್ ಅಧ್ಯಕ್ಷರಾದ ನವೀನ ಚಂದ್ರ ಸುವರ್ಣ ಕಾಪು, ರಮೇಶ್ ಕಾಂಚನ್ ಉಡುಪಿ, ಡಿಸಿಸಿ ಕಾರ್ಯದರ್ಶಿಗಳಾದ ನಾಗೇಶ್ ಉದ್ಯಾವರ, ಸದಾಶಿವ ಅಮೀನ್, ಪ್ರದೀಪ ಬೇಲಾಡಿ, ಅಲ್ಪಸಂಖ್ಯಾತ ಘಟಕದ ಸರ್ಫುದ್ಧೀನ್ ಶೇಕ್, ನವೀನ್ ಶೆಟ್ಟಿ, ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿ’ಸೋಜಾ, ಕಾಂತಿ ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಮಾಲಿನಿ ರೈ, ಅಲ್ಪ ಸಂಖ್ಯಾತ ಘಟಕದ ಮಹಮ್ಮದ್ ಅಸ್ಲಾಂ, ಯುವ ಕಾಂಗ್ರೆಸ್ ನ ಸೌರಭ್ ಬಲ್ಲಾಳ್, ಆಕಾಶ್ ಪೂಜಾರಿ, ರವಿರಾಜ್ ಉಡುಪಿ, ರಮೀದ್ ಹುಸೇನ್ ಕಾಪು, ನವೀನ್ ಕಾಪು, ಮಾಜಿ ಜಿ.ಪಂ. ಸದಸ್ಯ ಸುಪ್ರೀತ್ ಶೆಟ್ಟಿ, ಶೇಕಬ್ಬ, ನವೀನ್ ಶೆಟ್ಟಿ, ಡಿಸಿಸಿ ಸದಸ್ಯರು, ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪುರಸಭಾ ಸದಸ್ಯರಾದ ಆಶ್ಪಕ್ ಅಹಮ್ಮದ್, ಪ್ರತಿಮಾ ರಾಣೆ, ರೆಹಮತ್ ಶೇಖ್, ನಳಿನಿ ಆಚಾರ್ಯ, ಮಾಜಿ ಅಧ್ಯಕ್ಷ ಸುಬೀತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕುಮಾರ್ ಪ್ರಸ್ತಾವನೆಗೈದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಸ್ವಾಗತಿಸಿ, ಸುರಯ್ಯ ಅಂಜುಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ ವಂದಿಸಿದರು.