Thursday, December 1, 2022
spot_img
HomeUncategorizedಕಾರ್ಕಳ ಹೆಬ್ರಿ ತಾಲೂಕಿನ 7 ಮಂದಿ ಸೇರಿದಂತೆ ಒಂದು ಸಂಸ್ಥೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಕಾರ್ಕಳ ಹೆಬ್ರಿ ತಾಲೂಕಿನ 7 ಮಂದಿ ಸೇರಿದಂತೆ ಒಂದು ಸಂಸ್ಥೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಉಡುಪಿ : ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಭಾನುವಾರ ಪ್ರಕಟಗೊಂಡಿದ್ದು, ಕಾರ್ಕಳ ಹೆಬ್ರಿ ಉಭಯ ತಾಲೂಕಿನ 7 ಮಂದಿ ಸೇರಿದಂತೆ ಒಂದು ಸಂಸ್ಥೆ ಪ್ರಶಸ್ತಿಗೆ ಆಯ್ಕೆಯಾಗಿದೆ. ದೈವಾರಾಧನೆಗಾಗಿ ಹಿರ್ಗಾನದ ಲೋಕು ಪೂಜಾರಿ, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಇನ್ನಾ ಗ್ರಾಮದ ಸಾಂತೂರು ಕೊಪ್ಪ ಬಾಬು ಕೆ., ಕಲೆಗಾಗಿ ಎಣ್ಣೆಹೊಳೆಯ ಗಣೇಶ್‌ ನಾಯಕ್‌, ಸಂಕೀರ್ಣ ಕ್ಷೇತ್ರದಲ್ಲಿ ಹಿರಿಯಂಗಡಿ ಕೆ. ಸುಬ್ರಹ್ಮಣ್ಯ ಆಚಾರ್ಯ, ಸಮಾಜ ಸೇವೆಗಾಗಿ ಕಾರ್ಕಳ ಆರಾಮ್‌ ಇಂಡಸ್ಟ್ರೀಸ್‌ನ ಟಿ. ರಾಮಚಂದ್ರ ನಾಯಕ್ ಹಾಗೂ ಹೆಬ್ರಿಯ ಐತು ಕುಲಾಲ್‌, ವೈದ್ಯಕೀಯ ಸೇವೆಗಾಗಿ ಡಾ. ಸುನೀಲ್‌ ಮುಂಡ್ಕೂರು ಹಾಗೂ ಕಾರ್ಕಳ ಶ್ರೀ ಶಾರದ ಪೂಜಾ ಸಮಿತಿ ಸಂಘ ಸಂಸ್ಥೆಯ ನೆಲೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 36 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದ್ದು, ಎಸ್‌ಕೆಪಿಎ (ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌)ಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಸಂದಿದೆ.

LEAVE A REPLY

Please enter your comment!
Please enter your name here

Most Popular

error: Content is protected !!