Thursday, December 1, 2022
spot_img
Homeಸುದ್ದಿಸಾಹಿತಿ, ಕಲಾವಿದರಿಗೂ 2 ಸಾವಿರ ರೂ. ಮಾಸಾಶನ

ಸಾಹಿತಿ, ಕಲಾವಿದರಿಗೂ 2 ಸಾವಿರ ರೂ. ಮಾಸಾಶನ


ಹಿರಿಯ ಸಾಹಿತಿಗಳಿಗೆ ಸರ್ಕಾರದ ಸಹಾಯಹಸ್ತ

ಬೆಂಗಳೂರು : ಇತ್ತೀಚೆಗಷ್ಟೇ ದೈವ ನರ್ತಕರಿಗೆ ಮಾಸಾಶನ ಘೋಷಿಸಿದ್ದ ಸರಕಾರ ಇದೀಗ ಹಿರಿಯ ಸಾಹಿತಿಗಳು ಮತ್ತು ಕಲಾವಿದರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಬಂಪರ್ ಆಫರ್ ಕೊಟ್ಟಿದೆ.
ರಾಜ್ಯದ ಅರ್ಹ ಹಿರಿಯ ಸಾಹಿತಿಗಳು, ಕಲಾವಿದರಿಗೆ ಮಾಸಾಶನ ಮಂಜೂರು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕಷ್ಟದಲ್ಲಿರುವ ಕಲಾವಿದರ ನೆರವಾಗುವ ನಿಟ್ಟಿನಲ್ಲಿಸರ್ಕಾರ ಹಿರಿಯ ಸಾಹಿತಿ, ಕಲಾವಿದರಿಗೆ 2 ಸಾವಿರ ರೂ. ಮಾಸಾಶನ ನೀಡಲು ಮುಂದಾಗಿದ್ದು ಈ ಕುರಿತು ಆದೇಶ ಹೊರಡಿಸಿದೆ.
ಸೆಪ್ಟಂಬರ್ 1ರಿಂದ ಜಾರಿಗೆ ಬರುವಂತೆ 2,000 ರೂಪಾಯಿ ಮಾಸಾಶನ ನೀಡುವಂತೆ ಸರ್ಕಾರ ತಿಳಿಸಿದೆ. 2018-19, 2019-20 ಮತ್ತು 2020-21ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಮಾಸಾಶನ ಮಂಜೂರು ಮಾಡಿದೆ.
ವಯಸ್ಸಾದ ಕ್ರೀಯಾಶೀಲ ಹಿರಿಯರ ಅನುಭವ ಮತ್ತು ಶಕ್ತಿಯನ್ನು ಬಳಕೆ ಮಾಡುವುದು ಜಾಣತನ. ಹೀಗಾಗಿ ನಾನು ವಿಶ್ವ ಹಿರಿಯ ನಾಗರಿಕರ ದಿನದಂದು ಒಂದು ತೀರ್ಮಾನವನ್ನು ಮಾಡಿದ್ದೇನೆ. ಎಲ್ಲೆಲ್ಲಿ ಸಾಧ್ಯವಿದೆ ಅಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಸರ್ಕಾರದ ಸಹಾಯ, ಸಲಹೆಗಳಿಗಾಗಿ ತೆಗೆದುಕೊಳ್ಳುವ ಕೆಲಸವನ್ನು ನಾವು ಮಾಡುತ್ತೇವೆ. ಇದರಿಂದ ಯಾವುದೇ ಯುವಕರಿಗೆ ತೊಂದರೆ ಆಗುವುದಿಲ್ಲ. ಖಾಲಿಯಾದ ಹುದ್ದೆಗಳಿಗೆ ಯುವಕರನ್ನೇ ತುಂಬುತ್ತೇವೆ. ಹಿರಿಯರ ಅನುಭವ ಬುತ್ತಿಯನ್ನು ನಾವು ಈ ನಾಡು ಕಟ್ಟಲು ಬಳಕೆ ಮಾಡಿಕೊಳ್ಳುತ್ತೇವೆ. ಇದರ ಸಲಹೆಯನ್ನು ನಾನು ನಮ್ಮ ಇಲಾಖೆಯ ಅಧಿಕಾರಿಗಳಿಗೆ ನೀಡಿ, ವಿಶೇಷವಾದ ಯೋಜನೆಯನ್ನು ರೂಪಿಸಲು ಸೂಚಿಸುತ್ತೇನೆ ಎಂದು ಈ ಹಿಂದೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!