Thursday, December 1, 2022
spot_img
Homeಸಿನೆಮಾಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿ

ಚುನಾವಣೆಯಲ್ಲಿ ಸ್ಪರ್ಧಿಸಲು ರೆಡಿ

ರಾಜಕೀಯ ಪ್ರವೇಶದ ಅಪೇಕ್ಷೆ ವ್ಯಕ್ತಪಡಿಸಿದ ಬಾಲಿವುಡ್‌ ನಟಿ

ಮುಂಬಯಿ: ನಟಿಯಾಗಿ ಯಶಸ್ವಿಯಾಗಿರುವ ಕಂಗನಾ ರಣಾವತ್‌ ಈಗ ರಾಜಕೀಯ ಪ್ರವೇಶಿಸುವ ಉತುಕತೆಯಲ್ಲಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಿ ತವರು ರಾಜ್ಯ ಹಿಮಾಚಲ ಪ್ರದೇಶದ ಜನರಿಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದರೆ ನಾನು ರೆಡಿ ಇದ್ದೇನೆ ಎನ್ನುವ ಮೂಲಕ ಕಂಗನಾ ರಣಾವತ್‌ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಕೊಡಿ ಎಂದು ಪರೋಕ್ಷವಾಗಿ ಅಪೇಕ್ಷೆ ಸಲ್ಲಿಸಿದ್ದಾರೆ.
ನ. 12ರಂದು ಹಿಮಾಚಲ ಪ್ರದೇಶ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಶಿಮ್ಲಾದಲ್ಲಿ ನಡೆದ ‘ಪಂಚಾಯತ್ ಆಜ್ತಕ್ ಹಿಮಾಚಲ ಪ್ರದೇಶ’ದ ಕಾರ್ಯಕ್ರಮದಲ್ಲಿ ಭಾಗವಹಿಸಿದನಟಿ ಈ ಬಗ್ಗೆ ಮಾತನಾಡಿ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಈ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದ್ದ ಕಂಗನಾ, ತಮ್ಮ ಚಲನಚಿತ್ರ ವೃತ್ತಿಜೀವನದ ಮೇಲೆ ಗಮನ ಕೇಂದ್ರೀಕರಿಸಿರುವುದರಿಂದ ವೃತ್ತಿಪರವಾಗಿ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ತಮ್ಮ ನಿರ್ಧಾರ ಬದಲಿಸಿದ್ದಾರೆ.
ಈಗಾಗಾಲೇ ಹಲವು ಬಾರಿ ಬಿಜೆಪಿ ಪರ ತಮ್ಮ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಮೂಲಕ ಕಂಗನಾ ರಾಜಕೀಯ ವಲಯದಲ್ಲಿ ಭಾರಿ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!