ಇಂದು ವಾಕಾದಲ್ಲಿ ಭಾರತ- ದಕ್ಷಿಣ ಆಫ್ರಿಕ ಮುಖಾಮುಖಿ

ಎರಡೂ ತಂಡಗಳಿಗೆ ಸೆಮಿ ಫೈನಲ್‌ ತಲುಪಲು ಗೆಲುವು ಅನಿವಾರ್ಯ

ಪರ್ತ್ : ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಇಂದಿನ ಪಂದ್ದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕ ಆಸ್ಟ್ರೇಲಿಯದ ಪರ್ತ್‌ನಲ್ಲಿರುವ ವಾಕಾ ಸ್ಟೇಡಿಯಂನಲ್ಲಿ ಸಂಜೆ 4.30ಕ್ಕೆ ಮುಖಾಮುಖಿಯಾಗಲಿವೆ. 25 ದಿನಗಳ ಹಿಂದಷ್ಟೇ ಇಂದೋರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದ್ದವು.
ಈ ವರ್ಷ ಎರಡೂ ತಂಡಗಳಿಗೆ ಟಿ20ಯಲ್ಲಿ ಇದು 9ನೇ ಪಂದ್ಯವಾಗಿದ್ದು, ವಿಶ್ವಕಪ್‌ನಲ್ಲಿ ಸೆಮಿ ಫೈನಲ್ ತಲುಪಬೇಕಾದರೆ ಹಾಗೂ ಅಗ್ರಸ್ಥಾನಕ್ಕಾಗಿ ಇಂದಿನ ಪಂದ್ಯ ಗೆಲುವು ಇತ್ತಂಡಗಳಿಗೆ ಅನಿವಾರ್ಯವಾಗಿದೆ.
ವಿಶೇಷವಾಗಿ ಟೀಂ ಇಂಡಿಯಾ ಹರಿಣಗಳ ವಿರುದ್ಧದ ಪಂದ್ಯದ ಈ ಬಳಿಕ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧ ಆಡಲಿದೆ. ದಕ್ಷಿಣ ಆಫ್ರಿಕಾ ಕೂಡ ಪಾಕಿಸ್ಥಾನ ಮತ್ತು ನೆದರ್‌ಲ್ಯಾಂಡ್ಸ್ ವಿರುದ್ಧ ಸೆಣಸಾಡಬೇಕಿದೆ.
ಟಿ20 ಆರಂಭಕ್ಕೂ 2 ವಾರಗಳ ಮೊದಲೇ ಪರ್ತ್‌ಗೆ ಬಂದಿದ್ದ ರೋಹಿತ್ ಪಡೆ ವಾಕಾದ ಬೌನ್ಸ್ ಪಿಚ್‌ನಲ್ಲಿ ಚೆಂಡನ್ನು ಎದುರಿಸುವ ಬಗ್ಗೆ ಚೆನ್ನಾಗಿ ಅಭ್ಯಾಸ ನಡೆಸಿದೆ. ಆದರೂ ಇಲ್ಲಿ ಬೌನ್ಸ್ ಎದುರಿಸಲುವುದು ಅಷ್ಟು ಸುಲಭದ ಮಾತಲ್ಲ.
ನೆದರ್‌ಲ್ಯಾಂಡ್ಸ್ ವಿರುದ್ಧ ಅರ್ಧ ಶತಕ ಹೊಡೆದು ನಾಯಕ ರೋಹಿತ್ ಶರ್ಮಾ ಫಾರ್ಮ್‌ಗೆ ಮರಳಿರುವ ಸೂಚನೆ ನೀಡಿದ್ದಾರೆ. ಕೆ.ಎಲ್.ರಾಹುಲ್ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಬೇಕಿದೆ. ಸದ್ಯ ಟೀಂ ಇಂಡಿಯಾ ಈಗಾಗಲೇ ಆಡಿರುವ ಎರಡೂ ಪಂದ್ಯಗಳಿಗೆ ಮಳೆ ಅಡ್ಡಿ ಪಡಿಸದ ಏಕೈಕ ತಂಡವಾಗಿದ್ದು, ಆ ಎರಡು ಪಂದ್ಯಗಳನ್ನು ಗೆದ್ದು ಗ್ರೂಪ್ 2ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್ ವಿಭಾಗವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಬೌಲರ್-ಸ್ನೇಹಿ ಪಿಚ್‌ನಲ್ಲಿ ಎರಡು ಅಗ್ರ ಟಿ20 ತಂಡಗಳಲ್ಲಿ ಬೌನ್ಸ್ ಪಿಚ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ತಂಡ ಮೇಲುಗೈ ಸಾಧಿಸುವ ಸಾಧ್ಯತೆಯೇ ಹೆಚ್ಚು.
ಇಲ್ಲಿ ಆಡಿರುವ 21 ಪಂದ್ಯಗಳ ಪೈಕಿ 13ರಲ್ಲಿ ಮೊದಲು ಬ್ಯಾಟಿಂಗ್ ಮಾಡಿರುವ ತಂಡ ಗೆಲುವು ಸಾಧಿಸಿದೆ. ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರೆ ಆಶ್ಚರ್ಯ ಪಡಬೇಡಬೇಕಾಗಿಲ್ಲ. ಇಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಒಟ್ಟು 133 ಆಗಿದ್ದರೂ ಚೇಸಿಂಗ್ ಕಷ್ಟ ಎಂದು ವಿಶ್ಲೇಷಿಸಲಾಗಿದೆ. ಹೀಗಾಗಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡ ಸಾಧಾರಣ ಮೊತ್ತ ಕಲೆಹಾಕಿದರೂ ಗೆಲುವು ಪಡೆಯಬಹುದು.

Latest Articles

error: Content is protected !!