Saturday, December 10, 2022
spot_img
HomeUncategorizedಅಪರಾಧ - ಅಪಘಾತ

ಅಪರಾಧ – ಅಪಘಾತ

ಮಾಳ : ಪಿಕಪ್‌ ಬೈಕ್‌ಗೆ – ಡಿಕ್ಕಿ

ಕಾರ್ಕಳ : ಮಾಳ ಗ್ರಾಮದ ಮಾಳ ಚೆಕ್ ಪೊಸ್ಟ್ ಬಳಿ ಬೈಕ್‌ಗೆ ಪಿಕಪ್‌ ಡಿಕ್ಕಿ ಹೊಡೆದ ಘಟನೆ ಶನಿವಾರ ಸಂಭವಿಸಿದೆ. ಚೆಕ್‌ ಪೋಸ್ಟ್‌ನಿಂದ 1.5 ಕಿ.ಮೀ ದೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಿಪ್ರಸಾದ್ ಎಂಬವರು ಕಾರ್ಕಳ ಕಡೆಯಿಂದ ಎಸ್.ಕೆ. ಬಾರ್ಡರ್ ಕಡೆಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ ಕೇಶವ ಎಂಬವರು ಚಲಾಯಿಕೊಂಡು ಬರುತ್ತಿದ್ದ ಪಿಕಪ್ ಡಿಕ್ಕಿಯಾಗಿದೆ. ಪರಿಣಾಮ ದೇವಿಪ್ರಸಾದ್ ಶೆಟ್ಟಿ ಬೈಕ್‌ ಸಹಿತ ರಸ್ತೆಗೆ ಬಿದ್ದು, ಗಾಯಗೊಂಡಿದ್ದಾರೆ. ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ರಿ : ಹೃದಯಾಘಾತದಿಂದ ವ್ಯಕ್ತಿ ಸಾವು
ಹೆಬ್ರಿ : ಶಿವಪುರದ ಮುಳ್ಳುಗುಡ್ಡೆಯ ಎಸ್.ಎಸ್ ಇಂಡಸ್ಟೀಸ್ ಗೇರು ಬೀಜ ಪ್ಯಾಕ್ಟರಿಯ ಕಾರ್ಮಿಕ ಅಸ್ಸಾಂ ರಾಜ್ಯದ ಸೋನಿತ್‌ಪುರದ ಗೋಪಾಲ ನಜ್ರರಿ (57) ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಬೆಳ್ಮಣ್‌ : ಕಾರು ಬೈಕ್‌ಗೆ ಡಿಕ್ಕಿ
ಕಾರ್ಕಳ : ಬೆಳ್ಮಣ್ ಗ್ರಾಮದ ನೀರ್ಚಾಲು ಕಾರ್ಕಳ –ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಕಾರು ಹಾಗೂ ಬೈಕ್‌ ಡಿಕ್ಕಿಯಾದ ಘಟನೆ ಅ. 28ರಂದು ಸಂಭವಿಸಿದೆ. ಬೆಳ್ಮಣ್ ಕಡೆಯಿಂದ ಪಡುಬಿದ್ರೆ ಕಡೆಗೆ ಜಾರ್ಜ ಡಿಸೋಜಾ (74) ಎಂಬವರು ಬೈಕ್‌ ಚಲಾಯಿಸಿಕೊಂಡು ಪೆಲತಕಟ್ಟೆ ಕ್ರಾಸ್ ತಿರುಗಿಸುವ ವೇಳೆ ಬೆಳ್ಮಣ್ ಕಡೆಯಿಂದ ಪಡುಬಿದ್ರೆ ಕಡೆಗೆ ಮಹಮ್ಮದ್ ಸಮಸ್ ಎಂಬವರು ತನ್ನ ಮುಂದಿದ್ದ ಕಾರನ್ನು ಓವರ್ ಟೇಕ್ ಮಾಡಿ ಜಾರ್ಜ ಡಿʼ ಸೋಜಾ ಅವರ ಬೈಕಿಗೆ ಡಿಕ್ಕಿ ಹೊಡೆದಿರುತ್ತಾರೆ. ಪರಿಣಾಮ ಜಾರ್ಜ ಡಿಸೋಜಾ ರವರು ಬೈಕ್ ಸಮೇತ ಡಾಮಾರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!