ಹ್ಯಾಲೊವೀನ್‌ ಹಬ್ಬದ ಸಂದರ್ಭದಲ್ಲಿ ಕಾಲ್ತುಳಿತ : ಕನಿಷ್ಠ 150 ಸಾವು

200ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ; ಸಾವಿನ ಸಂಖ್ಯೆ ಏರುವ ಭೀತಿ

ಸಿಯೋಲ್: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ನಡೆದ ಹ್ಯಾಲೊವೀನ್ ಆಚರಣೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 150 ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಹಲವರು ಹೃದಯ ಸ್ತಂಭನಕ್ಕೆ ಒಳಗಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇಟಾವಾನ್ ಲೈಶರ್ ಜಿಲ್ಲೆಯ ಹ್ಯಾಮಿಲ್ಟನ್‌ ಹೋಟೆಲಿನ ಎದುರು ಕಿರಿದಾದ ರಸ್ತೆಯಲ್ಲಿ ಸಿಕ್ಕಾಪಟ್ಟೆ ಜನಸಂದಣಿ ಜಮಾಯಿಸಿದ್ದರಿಂದ ಕಾಲ್ತುಳಿತ ಆಗಿ ಈ ಘಟನೆ ಸಂಭವಿಸಿದೆ. ಇದು ದಕ್ಷಿಣ ಕೊರಿಯಾದಲ್ಲಿ ಹ್ಯಾಲೊವೀನ್‌ ಆಚರಿಸುವ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ.
ಹಿಂದಿನವರು ತಳ್ಳಿದಾಗ ಜನರು ಮುಗ್ಗರಿಸಿ ಬಿದ್ದು ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಿಂದಾಗಿ ಹೃದಯ ಸ್ತಂಭನದಿಂದ ಬಳಲುತ್ತಿರುವ ಸುಮಾರು 50 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಉಸಿರಾಟದ ತೊಂದರೆ ಇರುವವರಿಂದ 81 ಕರೆಗಳು ಬಂದಿವೆ ಎಂದು ತುರ್ತು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಹ್ಯಾಲೊವೀನ್ ದೊಡ್ಡ ಹಬ್ಬ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಜನರು ರಾಕ್ಷಸರ ರೀತಿ ಮೇಕಪ್ ಹಾಕಿಕೊಂಡು ಭಯಾನಕ ಬಟ್ಟೆಗಳನ್ನು ಧರಿಸುತ್ತಾರೆ.

Latest Articles

error: Content is protected !!