ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಕೋಟಿ ಕಂಠ ಗಾಯನ

ಕಾರ್ಕಳ : ಲಯನ್ಸ್ ಕ್ಲಬ್ ಕಾರ್ಕಳ ಸಿಟಿ, ಕಾರ್ಕಳ ನಗರ ಬಿಜೆಪಿ, ಶಿರಡಿ ಸಾಯಿ ಕಾಲೇಜು ಕಾರ್ಕಳ, ಆಟೋ ರಿಕ್ಷಾ ಚಾಲಕರು/ ಮಾಲಕರು ಬಸ್ಸು ನಿಲ್ದಾಣ ಕಾರ್ಕಳ, ಹಿರಿಯ ನಾಗರಿಕರ ವೇದಿಕೆ ಕಾರ್ಕಳ ಮತ್ತು ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕರೆ ನೀಡಿರುವ ಕೋಟಿ ಕಂಠದ ಗಾಯನ ಕಾರ್ಯಕ್ರಮವು ಅ. 28 ರಂದು ಬೆಳಿಗ್ಗೆ ಗಂಟೆ 11ಕ್ಕೆ ಸರಿಯಾಗಿ ಕಾರ್ಕಳ ಬಸ್ಸು ನಿಲ್ದಾಣದಲ್ಲಿ ನಡೆಯತು. ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಜಗದೀಶ್ ಪೈ ಕನ್ನಡ ಮಾತೆಗೆ ಪುಷ್ಪಾರ್ಚನೆ ಗೈಯ್ಯುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಲಯನ್‌ ಕ್ಲಬ್‌ ಕಾರ್ಕಳ ಸಿಟಿ ಇದರ ಅಧ್ಯಕ್ಷ ಲಯನ್‌ ಪ್ರವೀಣ್‌ ಸುವರ್ಣ, ಲಯನ್‌ ಚಂದ್ರಹಾಸ ಸುವರ್ಣ, ಲಯನ್‌ ಎಸ್. ನಿತ್ಯಾನಂದ ಪೈ, ಲಯನ್‌ ಯೋಗೇಶ್‌ ನಾಯಕ್‌, ಲಯನ್‌ ಟಿ. ಕೆ. ರಘುವೀರ್‌, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.error: Content is protected !!
Scroll to Top