ಮುಂಬೈಯಲ್ಲಿ ಕೋಟಿ ಕಂಠ ಗಾಯನ

ಮುಂಬೈ : ಕನ್ನಡಿಗರ ಬಳಗ ಮುಂಬಯಿ ಸಂಯೋಜನೆಯಲ್ಲಿ ಮೀರಾ- ಭಾಯಂದರ್ ನ ಮೆವಾರ್ ವಾಟಿಕಾ ಸಭಾಂಗಣದಲ್ಲಿ ಅ. 28ರಂದು ಅತ್ಯಂತ ಅದ್ಧೂರಿಯಾಗಿ ಕೋಟಿ ಕಂಠ ಗಾಯನ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕಿ ಗೀತಾ ಜೈನ್ ಮಾತನಾಡಿ, ಕನ್ನಡಿಗರಾದ ತಾವು ಜನ್ಮಭೂಮಿಯ ಮೇಲೆ ಅತೀವ ಪ್ರೀತಿ ಹೊಂದಿದ್ದೀರಿ. ಕರ್ನಾಟಕ ಸರಕಾರ ಬಹಳ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿದೆ. ಅದನ್ನು ಮೀರಾ- ಭಾಯಂದರ್‌ನಲ್ಲಿ ಮಹೇಶ್ ಶೆಟ್ಟಿಯವರ ತಂಡ ಯಶಸ್ವಿಗೊಳಿಸಿದೆ. ಕನ್ನಡಿಗರು ತಮ್ಮೂರಿನ ಬಗ್ಗೆ ವಿಶೇಷ ಪ್ರೀತಿ, ಗೌರವ, ಅಭಿಮಾನ ಹೊಂದಿದ್ದು, ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಗುರುತಿಸಿಕೊಂಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರು ಸಚಿವ ವಿ. ಸುನೀಲ್‌ ಕುಮಾರ್‌ ಅವರ ನೇತೃತ್ವದಲ್ಲಿ ವಿಶ್ವದಾದ್ಯಂತ ಕೋಟಿ ಕಂಠ ಗಾಯನ ನಡೆದಿದೆ. ಇದೊಂದು ಐತಿಹಾಸಿಕ ಹಾಗೂ ಅರ್ಥಪೂರ್ಣ ಕಾರ್ಯಕ್ರಮ. ಕೋಟಿ ಕಂಠ ಗಾಯನದ ಮೂಲಕ ಮುಂಬೈಯಲ್ಲಿ ತುಳು ಕನ್ನಡಿಗರು ಒಂದುಗೂಡಿ ಕನ್ನಡ ಪ್ರೇಮ ಮೆರೆಯುವಂತಾಗಿದೆ ಎಂದರು.
ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಉಪಾಧ್ಯಕ್ಷ ರತ್ನಾಕರ ಶೆಟ್ಟಿ, ನಿವೃತ್ತ ಪೊಲೀಸ್ ಅಧಿಕಾರಿ ಪ್ರಕಾಶ್ ಭಂಡಾರಿ, ಐಕಳ ಹರೀಶ್ ಶೆಟ್ಟಿ, ಸುರೇಶ್ ರಾವ್, ಆರ್.ಕೆ. ಶೆಟ್ಟಿ ಬಿಜೆಪಿಯ ಮೀರಾ – ಭಾಯಂದರ್‌ನ ಜಿಲ್ಲಾಧ್ಯಕ್ಷ ರವಿ ವ್ಯಾಸ, ಕಾರ್ಯಕ್ರಮ ಆಯೋಜಕರಾದ ಹರೀಶ್ ಶೆಟ್ಟಿ ಎರ್ಮಾಳ್, ಗಿರೀಶ್ ಶೆಟ್ಟಿ ತೆಳ್ಳಾರ್, ಶುಭಂ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ಸಿಎಂಡಿ, ಮೀರಾ- ಭಾಯಂದರ್‌ನ ನಗರ ಸೇವಕ ಅರವಿಂದ ಎ. ಶೆಟ್ಟಿ ಉಪಸ್ಥಿತರಿದ್ದರು.

ಸನ್ಮಾನ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ದಯಾ ನಾಯಕ್, ಎಂ.ಎಂ. ಕೋರಿ, ವಿಜಯ ಕುಮಾರ್‌ ತೋನ್ಸೆ, ಡಾ. ಆರ್.ಕೆ. ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಡಾ. ಸುರೇಶ್ ರಾವ್, ಕೆ.ಡಿ. ಶೆಟ್ಟಿ, ಡಾ. ಸುರೇಶ್‌ ರಾವ್‌, ಕರ್ನಾಟಕ ಮಲ್ಲ ಪತ್ರಿಕೆ ಸಂಪಾದಕ ಚಂದ್ರಶೇಖರ್‌ ಪಾಲೆತ್ತಾಡಿ, ಡಾ. ಸುನೀತಾ ಶೆಟ್ಟಿ, ಡಾ. ಭರತ್‌ ಕುಮಾರ್‌ ಪೊಲಿಪು ಮತ್ತು ಓಂದಾಸ್ ಕಣ್ಣಂಗಾರ್, ಮೊಗವೀರ ವ್ಯವಸ್ಥಾಪಕ ಮಂಡಳಿಯ ಪರವಾಗಿ ಅಶೋಕ್ ಸುವರ್ಣ, ಮೈಸೂರು ಎಸೋಸಿಯೇಶನ್‌ನ ಪರವಾಗಿ ಮಧುಸೂದನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಂಟರ ಸಂಘದ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ಸ್ವಾಗತಿಸಿದರು. ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ನಿರೂಪಿಸಿದರು. ವಿಜಯ್‌ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮೀರಾ – ಭಾಯಂದರ್‌ನ ವಿವಿಧ ತಂಡಗಳಿಂದ ನೃತ್ಯ ಕಾರ್ಯಕ್ರಮ ಜರಗಿತು.

ಶಶಿಧರ ಕೆ. ಶೆಟ್ಟಿ ಇನ್ನಂಜೆ , ರವೀಂದ್ರ ಶೆಟ್ಟಿ ಗುತ್ತಿನಾ‌, ಅಶೋಕ್ ಪಕ್ಕಳ, ಕರ್ನೂರು ಮೋಹನ್ ರೈ, ಬಿಜೆಪಿಯ ಮೀರಾ – ಭಾಯಂದರ್‌ನ ಜಿಲ್ಲಾ ಉಪಾಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಮುನ್ನಲಾಯಗುತ್ತು, ಸಂಘಟಕ ಜಿ.ಕೆ. ಕೆಂಚನಕೆರೆ, ನವೀನ್‌ ಶೆಟ್ಟಿ, ಇನ್ನ ಬಾಳಿಕೆ, ಪ್ರೇಮನಾಥ್ ಶೆಟ್ಟಿ ಕೊಂಡಾಡಿ, ಕಿಶೋರ್ ಕುಮಾರ್‌ ಕುಶ್ಚಾ‌, ಕರುಣಾಕರ ಶೆಟ್ಟಿ ಕುಕ್ಕುಂದೂರು, ಬಾಬಾ ಪ್ರಸಾದ ಅರಸ, ದಿವಾಕರ್ ಶೆಟ್ಟಿ, ಪೊಸ್ರಾಲ್, ವೇಣುಗೋಪಾಲ್ ಶೆಟ್ಟಿ ಇನ್ನಂಜೆ, ಶಿವ ಪ್ರಸಾದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





























































error: Content is protected !!
Scroll to Top