ವಿಶ್ವದ ಅತಿದೊಡ್ಡ ಉದ್ಯೋಗದಾತರ ಶ್ರೇಯಾಂಕದಲ್ಲಿ ‘ಭಾರತ ರಕ್ಷಣಾ ಸಚಿವಾಲಯ’ ಅಗ್ರಸ್ಥಾನ

ನವದೆಹಲಿ: ಭಾರತದ ರಕ್ಷಣಾ ಸಚಿವಾಲಯವು ವಿಶ್ವದ ಅತಿದೊಡ್ಡ ಉದ್ಯೋಗದಾತ ಎಂದು ಸ್ಟ್ಯಾಟಿಸ್ಟಾ ವರದಿ ಹೇಳಿದೆ. 2.92 ಮಿಲಿಯನ್ ಜನರೊಂದಿಗೆ, ಇದು ಸಂಯೋಜಿತ ಸಕ್ರಿಯ ಸೇವಾ ಸಿಬ್ಬಂದಿ, ಮೀಸಲುದಾರರು ಮತ್ತು ನಾಗರಿಕ ಸಿಬ್ಬಂದಿಯನ್ನು ಒಳಗೊಂಡಿದೆ ಎಂದು ವರದಿ ಹೇಳಿದೆ. ಅಮೆರಿಕದ ರಕ್ಷಣಾ ಸಚಿವಾಲಯ ಎರಡನೇ ಸ್ಥಾನದಲ್ಲಿದೆ. ಅಲ್ಲಿ 29.1 ಲಕ್ಷ ಜನ ಉದ್ಯೋಗಿಗಳಿದ್ದಾರೆ ಎಂದು ವರದಿ ತಿಳಿಸಿದೆ. ಸ್ಟ್ಯಾಟಿಸ್ಟಾ’ ಎಂಬುದು ಜರ್ಮನಿಯ ಹ್ಯಾಂಬರ್ಗ್​ನ ಖಾಸಗಿ ಸಂಸ್ಥೆಯಾಗಿದ್ದು, ವಿಶ್ವದ ಅನೇಕ ವಿಷಯಗಳಿಗೆ ಸಂಬಂಧಿಸಿದ ಅಂಕಿಅಂಶಗಳನ್ನು ಒದಗಿಸುತ್ತದೆ.

Latest Articles

error: Content is protected !!