Saturday, December 10, 2022
spot_img
Homeಕ್ರೈಂಪಟಾಕಿಯಿಂದ ಹೊತ್ತಿ ಉರಿದ ಬೆಂಗ್ರೆಯಲ್ಲಿ ಲಂಗರು ಹಾಕಿದ್ದ ಮೂರು ಬೋಟ್‌ಗಳು

ಪಟಾಕಿಯಿಂದ ಹೊತ್ತಿ ಉರಿದ ಬೆಂಗ್ರೆಯಲ್ಲಿ ಲಂಗರು ಹಾಕಿದ್ದ ಮೂರು ಬೋಟ್‌ಗಳು

ಮಂಗಳೂರು : ನಗರದ ಬೆಂಗ್ರೆಯಲ್ಲಿ ಲಂಗರು ಹಾಕಲಾಗಿದ್ದ ಮೂರು ಬೋಟ್‌ಗಳು ಹೊತ್ತಿ ಉರಿದ ಘಟನೆ ಅ.28 ರಂದು ರಾತ್ರಿ ಗಂಟೆ 8ಕ್ಕೆ ನಡೆದಿದೆ. ದೀಪಾವಳಿ ಆಚರಣೆಯ ಪ್ರಯುಕ್ತ ಮಕ್ಕಳು ಸಿಡಿಸಿರುವ ಪಟಾಕಿಯ ಕಿಡಿಯಿಂದ ಈ ಬೋಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಲಕ್ಷದ್ವೀಪಕ್ಕೆ ಕಾರ್ಗೋ ಸಾಗಾಟ ಮಾಡುವ ಬೋಟ್‌ಗಳನ್ನು ಮಂಗಳೂರಿನ ಬೆಂಗ್ರೆಯಲ್ಲಿ ರಿಪೇರಿ ಮಾಡಲು ಲಂಗರು ಹಾಕಲಾದ ಸ್ಥಳದಲ್ಲಿಯೆ ಪಟಾಕಿ ಸಿಡಿಸಿದ ಪರಿಣಾಮ ಬೆಂಕಿ ಕಿಡಿಯು ಬೋಟ್‌ನೊಳಗೆ ಹಾರಿ ಈ ಅನಾಹುತ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಮೂರು ಬೋಟ್‌ಗಳು ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!