ಕೋಲಾರ : ತಾಲೂಕಿನ ತೊಟ್ಲಿ ಗ್ರಾಮದಲ್ಲಿ ಮೆದುಳು ಜ್ವರ ಪತ್ತೆಯಾಗಿದೆ. ಇದು ಸಾಂಕ್ರಮಿಕ ರೋಗವಾಗಿರುವುದರಿಂದ ರೋಗ ಹರಡಬಹುದು ಎಂಬ ಆತಂಕ ಗ್ರಾಮದ ಜನರಲ್ಲಿ ಹೆಚ್ಚಾಗಿದೆ. ಇನ್ನು ಮೆದುಳು ಜ್ವರದ ಪ್ರಕರಣ ಪತ್ತೆಯಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಅಲರ್ಟ್ ಆಗಿದೆ. ಅದರಂತೆ ತೊಟ್ಲಿ ಗ್ರಾಮದ 3 ಕಿ.ಮೀ. ವ್ಯಾಪ್ತಿಯಲ್ಲಿ ಹಂದಿ ಸಾಕಣೆ ಮಾಡದಂತೆ ನಿಷೇಧ ಹೇರಲಾಗಿದೆ. ಅಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಾಗೃತಿ ಮೂಡಿಸುತ್ತಿದ್ದು, 1ರಿಂದ 15 ವರ್ಷದ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಮನವಿ ಮಾಡಿಕೊಳ್ಳುತ್ತಿದೆ. ಅಲ್ಲದೆ ಗ್ರಾ. ಪಂ. ವ್ಯಾಪ್ತಿಯಲ್ಲಿ ಶುಚಿತ್ಚ ಕಾಪಾಡುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ.
ಮೆದುಳು ಜ್ವರದ ಲಕ್ಷಣಗಳು:-
ಜ್ವರ, ತಲೆನೋವು, ತಲೆಯಲ್ಲಿ ಮೃದುವಾದ ಗುಳ್ಳೆಗಳು ಏಳುವುದು, ಬೆಳಕಿಗೆ ಕಣ್ಣು ತೆರೆಯಲು ಸಾಧ್ಯವಾಗದಿರುವುದು, ಕುತ್ತಿಗೆ ಬಿಗಿಯಾಗುವುದು, ಕೋಮಾವಸ್ಥೆ, ತ್ವಚೆಯಲ್ಲಿ ಗುಳ್ಳೆಗಳು, ನಡೆದಾಡಲು ತೊಂದರೆ ಹಸಿವು ಇಲ್ಲದಿರುವುದು, ಮಾತನಾಡುವಾಗ ತೊದಲುವುದು, ಮೈಯಲ್ಲಿ ನಡುಕ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಲಕ್ಷಣಗಳು ಅಥವಾ ಸೋಂಕು ದೃಢಪಟ್ಟ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು.