ಈ ವರ್ಷದ ಕೊನೆಯ ಗ್ರಹಣ
ಕಾರ್ಕಳ: ವರ್ಷದ ಎರಡನೇ ಮತ್ತು ಕೊನೆಯ ಸೂರ್ಯ ಗ್ರಹಣವು ದೀಪಾವಳಿಯ ಸಮಯದಲ್ಲಿ ಸಂಭವಿಸಿತು ಮತ್ತು ಈಗ ವರ್ಷದ ಕೊನೆಯ ಮತ್ತು ಎರಡನೇ ಚಂದ್ರಗ್ರಹಣವು ನವಂಬರ್ನಲ್ಲಿ ಸಂಭವಿಸಲಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ವರ್ಷದ ಎರಡನೇ ಚಂದ್ರಗ್ರಹಣ ನವಂಬರ್ 8 ರಂದು ಸಂಭವಿಸುತ್ತದೆ. ಸಂಜೆ 5.32ಕ್ಕೆ ಪ್ರಾರಂಭವಾಗಿ ಸಂಜೆ 6.18 ಕ್ಕೆ ಕೊನೆಗೊಳ್ಳಲಿದೆ. ಗ್ರಹಣವು 45 ನಿಮಿಷ 48 ಸೆಕೆಂಡುಗಳ ಕಾಲ ಇರಲಿದೆ.
ಈ ಚಂದ್ರಗ್ರಹಣವನ್ನು ಕೋಲ್ಕತ್ತಾ, ಸಿಲಿಗುರಿ, ಪಾಟ್ನಾ, ರಾಂಚಿ, ಗುವಾಹಟಿ ಮುಂತಾದ ಸ್ಥಳಗಳಲ್ಲಿ ಕಾಣಬಹುದು. ಚಂದ್ರಗ್ರಹಣ ಉತ್ತರ ಮತ್ತು ಪೂರ್ವ ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಉತ್ತರ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದ ಬಹುತೇಕ ಭಾಗಗಳಲ್ಲಿ ಗೋಚರಿಸುತ್ತದೆ.