Thursday, December 1, 2022
spot_img
Homeಸ್ಥಳೀಯ ಸುದ್ದಿಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಸಂಭ್ರಮದ ಕೋಟಿ ಕಂಠ ಗಾಯನ

ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಸಂಭ್ರಮದ ಕೋಟಿ ಕಂಠ ಗಾಯನ

ಕಾರ್ಕಳ : ನಾಡಿನಾದ್ಯಂತ ಶುಕ್ರವಾರ ಸಂಭ್ರಮ, ಸಡಗರದಲ್ಲಿ ಕೋಟಿ ಕಂಠ ಗಾಯನ ಹಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್‌ ಕುಮಾರ್‌ ಅವರ ತವರು ಕ್ಷೇತ್ರ ಕಾರ್ಕಳದಲ್ಲಿ ಕೋಟಿ ಕಂಠ ಗಾಯನ ಅಭೂತಪೂರ್ವವಾಗಿ ನಡೆಯಿತು. ಸಮವಸ್ತ್ರ, ಕನ್ನಡದ ಶಾಲು ಧರಿಸಿದ ತಂಡಗಳು ಕನ್ನಡ ಡಿಂಡಿಮ ಮೊಳಗಿಸಿದರು. ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಶಾಲೆ, ಪಂಚಾಯತ್‌, ಸಾರ್ವಜನಿಕ ಸ್ಥಳಗಳು, ಸರಕಾರಿ ಇಲಾಖೆಗಳು, ಚರ್ಚ್‌, ಬಸದಿ, ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ಕನ್ನಡಿಗರು ವಯಸ್ಸಿನ ಬೇಧವಿಲ್ಲದೆ ಕನ್ನಡದ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.

ವಿಕಾಸ ಕಚೇರಿ, ಕೋಟಿ ಕಂಠ ಗಾಯನದ ಪ್ರಯುಕ್ತ ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಪ್ರಾದೇಶಿಕ ಅರಣ್ಯ ವಲಯ, ಕಾರ್ಕಳ ಸಾಮಾಜಿಕ ಅರಣ್ಯ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಇವರ ಸಹಯೋಗದೊಂದಿಗೆ ನಕ್ರೆ ಪೊಲೀಸ್ ಫೈರಿಂಗ್ ರೆಂಜ್ ಮೈದಾನದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ‌ ತಮ್ಮ ಕಚೇರಿ ಮುಂಭಾಗ ಕಾರ್ಯಕ್ರಮ ಉದ್ಭಾಟಿಸಿದರು. ಪ್ರಕಾಶ್ ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕಾಜೋಲ್ ಪಾಟೀಲ್, ಕುದುರೆಮುಖ ವನ್ಯಜೀವಿ ವಿಭಾಗದ ಎಲ್ಲ ವಲಯ ಅರಣ್ಯಾಧಿಕಾರಿಗಳು, ಕಚೇರಿ ಅಧೀಕ್ಷಕ ಹರಿಪ್ರಸಾದ್, ಪ್ರಕಾಶ್ಚಂದ್ರ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.


ಕೋಟಿ ಕಂಠ ಗಾಯನದ ಪ್ರಯುಕ್ತ ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಪ್ರಾದೇಶಿಕ ಅರಣ್ಯ ವಲಯ, ಕಾರ್ಕಳ ಸಾಮಾಜಿಕ ಅರಣ್ಯ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆ ಇವರ ಸಹಯೋಗದೊಂದಿಗೆ ನಕ್ರೆ ಪೋಲೀಸು ಫೈರಿಂಗ್ ರೆಂಜ್ ಮೈದಾನದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು. ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಇವರು ಕಾರ್ಯಕ್ರಮವನ್ನು ಉದ್ಭಾಟಿಸಿದರು. ಪ್ರಕಾಶ್ ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಕಾಜೋಲ್ ಪಾಟೀಲ್, ಕುದುರೆಮುಖ ವನ್ಯಜೀವಿ ವಿಭಾಗದ ಎಲ್ಲಾ ವಲಯ ಅರಣ್ಯಾಧಿಕಾರಿಗಳು, ಕಚೇರಿ ಅಧೀಕ್ಷಕ ಹರಿಪ್ರಸಾದ್, ಪ್ರಕಾಶ್ಚಂದ್ರ, ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

ಕೊಯಮತ್ತೂರಿನಲ್ಲಿ ಗಾಯನ
ತಮಿಳುನಾಡು ತೆರಳಿದ್ದ ಶಿವಪುರದ ವ್ಯಾಪಾರಸ್ಥರು ಅಲ್ಲಿಯೇ ಕೋಟಿ ಕಂಠ ಗಾಯನ ನಡೆಸಿದರು. ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ ಗ್ರಾಮ ಸಮಿತಿಯ ಅಧ್ಯಕ್ಷ ಗಣೇಶ್ ಹಾಂಡ, ಶಶಿಧರ್ ನಾಯಕ್, ಅಭಿಷೇಕ್ ಸೇರಿಗಾರ್, ಸುಂದರ ಕುಲಾಲ್, ಆಶಾ, ಭಾರತಿ, ಪೂರ್ಣಿಮಾ, ಅನಿತಾ, ಸರೋಜಿನಿ, ಚರಿತ, ವರ್ಷ, ಸಾನ್ವಿ, ಶಶಾಂಕ್, ಶ್ರೀವತ್ಸ, ಪ್ರದ್ವಿತ್ ಮೊದಲಾದವರು ಜೊತೆಗೂಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ನೀರೆ
ನೀರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್‌ ಅಧ್ಯಕ್ಷೆ ಶಾಲಿನಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಪಾಧ್ಯಕ್ಷ ಸತೀಶ್, ಸದಸ್ಯರು, ಗ್ರಾಮಕರಣಿಕರು, ಶ್ರೀ ಬನಶಂಕರಿ ಒಕ್ಕೂಟದ ಅಧ್ಯಕ್ಷ, ಎಲ್.ಸಿ.ಆರ್.ಪಿ. ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮೆಸ್ಕಾಂ ಸಿಬ್ಬಂದಿ, ಆರೋಗ್ಯ ಇಲಾಖಾ ಸಿಬ್ಬಂದಿ, ತಾ. ಪಂ. ನ ನಿಕಟಪೂರ್ವ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ವಿಕ್ರಂ ಹೆಗ್ಡೆ, ಗ್ರಾಮಸ್ಥರು, ಸಿಬ್ಬಂದಿವರ್ಗ ಹಾಡು ಹಾಡಿದರು.

ಮೆಸ್ಕಾಂ ಕಾರ್ಕಳ
ಮೆಸ್ಕಾಂ ಕಾರ್ಕಳ ವಿಭಾಗದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ವಿಭಾಗ ವ್ಯಾಪ್ತಿಯ ಎಲ್ಲ ಅಧಿಕಾರಿಗಳು, ಪವರ್ ಮ್ಯಾನ್ ಮತ್ತು ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಕಳ ನಗರ ಬಿಜೆಪಿ ನೇತೃತ್ವದಲ್ಲಿ, ಶಿರಡಿ ಸಾಯಿ ಕಾಲೇಜು ಕಾರ್ಕಳ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ, ಆಟೋ ರಿಕ್ಷಾ ಚಾಲಕರು/ ಮಾಲಕರು ಬಸ್ ನಿಲ್ದಾಣ ಕಾರ್ಕಳ, ಹಿರಿಯ ನಾಗರಿಕರ ವೇದಿಕೆ ಕಾರ್ಕಳ ಮತ್ತು ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಸಿದರು.

ಕಾರ್ಕಳ ನಗರ ಬಿಜೆಪಿ ನೇತೃತ್ವದಲ್ಲಿ, ಶಿರಡಿ ಸಾಯಿ ಕಾಲೇಜು ಕಾರ್ಕಳ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ, ಆಟೋ ರಿಕ್ಷಾ ಚಾಲಕರು/ ಮಾಲಕರು ಬಸ್ಸು ನಿಲ್ದಾಣ ಕಾರ್ಕಳ, ಹಿರಿಯ ನಾಗರಿಕರ ವೇದಿಕೆ ಕಾರ್ಕಳ ಮತ್ತು ಸುಂದರ ಪುರಾಣಿಕ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಕೋಟಿ ಕಂಠ ಗಾಯನ ಕಾರ್ಯಕ್ರಮವು ಕಾರ್ಕಳ ಬಸ್ಸು ನಿಲ್ದಾಣದಲ್ಲಿ ನಡೆಯಿತು. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ ಕನ್ನಡ ಮಾತೆಗೆ ಪುಷ್ಪಾರ್ಚನೆ ಗೈಯ್ಯುವ ಮೂಲಕ ಕೋಟಿ ಕಂಠ ಗಾಯನಕ್ಕೆ ಚಾಲನೆ ನೀಡಿದರು. ಚಂದ್ರಹಾಸ ಸುವರ್ಣ, ಎಸ್. ನಿತ್ಯಾನಂದ ಪೈ, ರಾಮಚಂದ್ರ ನಾಯಕ್, ಸಂತೋಷ್ ರಾವ್, ಪ್ರಭಾಕರ ಸುವರ್ಣ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್, ನಗರಾಧ್ಯಕ್ಷ ರವೀಂದ್ರ ಮೊ‌ಯ್ಲಿ ಉಪಸ್ಥಿತರಿದ್ದರು.

ಹಿರಿಯಂಗಡಿ ಎಸ್. ಎನ್. ವಿ ಪದವಿ ಪೂರ್ವ ಕಾಲೇಜಿನಲ್ಲಿ ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗೀತಾ ಗಾಯನ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಪ್ರದೀಪ್, ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಹಾಗೂ ಷೋಷಕರು ಪಾಲ್ಗೊಂಡರು. ಉಪನ್ಯಾಸಕಿ ಸುಪ್ರೀತಾ ಜೈನ್ ಎಲ್ಲರಿಗೂ ಸಂಕಲ್ಪ ವಿಧಿಯನ್ನು ಬೋಧಿಸಿದರು. ಮುಡಾರು ಗ್ರಾಮ ಪಂಚಾಯತ್ ಹಾಗೂ ಶಾಲಾ ಮಕ್ಕಳು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕೋಟಿ ಕಂಠ ಗಾಯನ ನಡೆಸಿಕೊಟ್ಟರು.

ಮುಡಾರು ಗ್ರಾಮ ಪಂಚಾಯತ್ ಹಾಗೂ ಶಾಲಾ ಮಕ್ಕಳು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕೋಟಿ ಕಂಠ ಗಾಯನ ನನ್ನ ನಾಡು ನನ್ನ ಹಾಡು

ಕಾರ್ಕಳ ತಾಲೂಕು ಪೊಲೀಸ್‌ ಇಲಾಖಾ ಸಿಬ್ಬಂದಿ ಕೋಟಿ ಕಂಠ ಗೀತ ಗಾಯನ ನೆರವೇರಿಸಿದರು.

ಅತ್ತೂರು ಚರ್ಚ್ ನಲ್ಲಿ ಕೋಟಿಕಂಠ ಗೀತ ಗಾಯನ ಜರುಗಿತು.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೂರ್ಯಂತೋಕ್ಲು

ಗೋಮಟೇಶ್ವರ ಬೆಟ್ಟ

ಅತ್ತೂರು ಚರ್ಚ್ ಪರಿಸರದಲ್ಲಿ

ಕಾರ್ಕಳ ತಾಲೂಕು ಆಫೀಸ್‌ ಸಿಬ್ಬಂದಿ

ಕಾರ್ಕಳ ತಾಲೂಕು ದಂಡಾಧಿಕಾರಿಯವರೊಂದಿಗೆ ಶಾಲಾ ವಿದ್ಯಾರ್ಥಿಗಳು

ಕೆರ್ವಾಶೆ ಗ್ರಾಮ ಪಂಚಾಯತ್

ಕಾರ್ಕಳದ ಚತುರ್ಮುಖ ಬಸದಿಯಲ್ಲಿ

ಶಿರ್ಲಾಲು ಗ್ರಾಮ ಪಂಚಾಯತ್

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡ್ಲಿ

ಅತ್ತೂರು ಶಾಲಾ ವಿದ್ಯಾರ್ಥಿಗಳು

ವರಂಗ ಗ್ರಾಮ ಪಂಚಾಯತ್

LEAVE A REPLY

Please enter your comment!
Please enter your name here

Most Popular

error: Content is protected !!