Thursday, December 1, 2022
spot_img
Homeಅಂಕಣಆರೋಗ್ಯ ಧಾರ : ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ

ಆರೋಗ್ಯ ಧಾರ : ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ

ದೇಹದ ಸುಂದರ ಅಂಗ ನಮ್ಮ ಕಣ್ಣು. ಈ ನಮ್ಮ ಕಣ್ಣಿಗೆ ದೃಷ್ಟಿ ಬಿದ್ದಿರುವ ಹಾಗೆ ಕಣ್ಣಿನ ದೋಷವೋ ಚಿಕ್ಕಂದಿನಿಂದಲೂ ಆರಂಭವಾಗಿದೆ. ಇದಕ್ಕೆ ಕಾರಣ ಟಿವಿ, ಕಂಪ್ಯೂಟರ್, ಮೊಬೈಲ್ ಗಳ ಅಧಿಕ ಬಳಕೆ ಎಂದು ಹೇಳಬೇಕಾಗಿಲ್ಲ. ನಮ್ಮ ಕಣ್ಣುಗಳ ಅಗತ್ಯಕ್ಕಿಂತ ಜಾಸ್ತಿ ಬಳಕೆ ಹಾಗೂ ಕೆಲವು ದಿನನಿತ್ಯದ ಅಭ್ಯಾಸಗಳಿಂದ ದೃಷ್ಟಿದೋಷವು ಉಲ್ಬಣಗೊಳ್ಳುತ್ತಿದೆ. ನಮ್ಮ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಬೇಕೆಂದು ತಿಳಿದುಕೊಳ್ಳೋಣ.
ಕಣ್ಣಿನ ಆರೋಗ್ಯಕ್ಕೆ ಹೀಗೆ ಮಾಡಿ :
• ಕಣ್ಣನ್ನು ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ತಣ್ಣೀರಿನಿಂದ ತೊಳೆಯಿರಿ. ಬೆಳಿಗ್ಗೆ ಹಲ್ಲು ಉಜ್ಜಿದ ನಂತರ ಬಾಯಲ್ಲಿ ನೀರು ತುಂಬಿಸಿ ಕಣ್ಣಿಗೆ ನೀರು ಸಿಂಪಡಿಸಿ.
• ಕಣ್ಣಿನ ಆರೋಗ್ಯಕ್ಕೆ ಆರರಿಂದ ಏಳು ಗಂಟೆಗಳ ನಿದ್ದೆ ಅವಶ್ಯಕತೆ ಇದೆ.
• ಕಣ್ಣುಗಳನ್ನು ಉಜ್ಜಬೇಡಿ. ಇದು ಕಣ್ಣಿಗೆ ಹಾನಿಯುಂಟು ಮಾಡುತ್ತದೆ.
• ತಲೆ ಮೇಲೆ ಸ್ನಾನ ಮಾಡುವಾಗ ಅಧಿಕ ಬಿಸಿ ನೀರನ್ನು ಬಳಸಬೇಡಿ. ಅದು ಕಣ್ಣಿಗೆ ಒಳ್ಳೆಯದಲ್ಲ. ತಣ್ಣೀರಿನ ತಲೆಸ್ನಾನ ಅಥವಾ ಸ್ವಲ್ಪ ಬಿಸಿ ಇದ್ದರೆ ಸಾಕು.
• ಬಿಸಿಲಿಗೆ ಹೋದಾಗ ಛತ್ರಿಯನ್ನು ಬಳಸಿ ಅಥವಾ ಕಣ್ಣಿಗೆ ತಂಪು ಕನ್ನಡಕ ಬಳಸಿ. ಬಿಸಿಲಿಗೆ ಹೋಗಿ ಒಳಗೆ ಬಂದ ತಕ್ಷಣ ಕಣ್ಣಿಗೆ ನೀರು ಸಿಂಪಡಿಸಬೇಡಿ.
• ಹಸಿ ಹಾಲಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣುಗಳು ಸ್ವಚ್ಚಗೊಳ್ಳುತ್ತವೆ.
• ಅಧಿಕ ಕೋಪ, ಅಧಿಕ ಅಳುವುದು, ದುಃಖಪಡುವುದು, ಧೂಮಪಾನ, ಅಧಿಕ ಬಿಸಿಲಿಗೆ ಅಡ್ಡಾಡುವುದು ಕಣ್ಣಿಗೆ ಒಳ್ಳೆಯದಲ್ಲ.
• ಕಣ್ಣಿನ ಆರೋಗ್ಯಕ್ಕೆ ಯೋಗಾಸನಗಳನ್ನು ಮಾಡಿ. ತ್ರಾಟಕ ಬಹಳ ಒಳ್ಳೆಯದು. ಭಸ್ತ್ರಿಕಾ ಪ್ರಾಣಾಯಾಮ, ಕಪಾಲಭಾತಿ, ಬಾಹ್ಯ ಪ್ರಾಣಾಯಾಮ, ಅನುಲೋಮ ವಿಲೋಮ, ಅಗ್ನಿಸಾರ ಕ್ರಿಯೆ, ಶವಾಸನ ಕಣ್ಣಿಗೆ ಒಳ್ಳೆಯದು.
• ಐ ರೊಟೇಶನ್ ವ್ಯಾಯಾಮವನ್ನು ಮಾಡುವುದರಿಂದ ದೃಷ್ಟಿ ದೋಷವನ್ನು ದೂರ ಮಾಡಬಹುದು. ಕಣ್ಣನ್ನು ಮೇಲೆ ಕೆಳಗಡೆ ನೋಡುವುದು. ಎಡಕ್ಕೆ ಬಲಕ್ಕೆ ನೋಡುವುದು. ಕ್ಲಾಕ್ ವೈಸ್ ಆ್ಯಂಟಿ ಕ್ಲಾಕ್ ವೈಸ್ ಐ ರೊಟೇಷನ್ ಮಾಡುವುದು.
• ಹಾಲು, ತುಪ್ಪ ,ಜೇನು ತುಪ್ಪ, ಅಕ್ಕಿ, ಗೋಧಿ, ಸೈಂಧವ ಲವಣ, ಬಾರ್ಲಿ, ಒಣದ್ರಾಕ್ಷಿ, ಬಾದಾಮಿ, ಶುಂಠಿ, ಲವಂಗ, ಸೊಪ್ಪು ,ತರಕಾರಿ ,ಕ್ಯಾರೆಟ್, ಹಣ್ಣುಗಳು ಕಣ್ಣಿಗೆ ಒಳ್ಳೆಯದು.
• ವರ್ಷಕ್ಕೆ ಒಮ್ಮೆ ಐ ಚೆಕ್ ಅಪ್ ಮಾಡಿಸಿ. ಬಿಪಿ ಹಾಗೂ ಡಯಾಬಿಟಿಸ್ ಇದ್ದವರು ಕಡ್ಡಾಯವಾಗಿ ಐ ಚೆಕ್ ಮಾಡಿ.
• ಪಂಚಕರ್ಮದಲ್ಲಿ ನಸ್ಯ, ನೇತ್ರ ತರ್ಪಣ (ನೇತ್ರಬಸ್ತಿ), ನೇತ್ರ ಅಂಜನ, ದೇಹ ಅಭ್ಯಂಗ ಹಾಗೂ ಪಾದಾಭ್ಯಂಗ ಒಳ್ಳೆಯದು.
• ಆಯುರ್ವೇದ ದ್ರವ್ಯಗಳು- ತ್ರಿಫಲಾ, ಭೃಂಗರಾಜ, ಅಶ್ವಗಂಧ, ಪುನರ್ನವ, ತುಳಸಿ ಇತ್ಯಾದಿಗಳು ನೇತ್ರಗಳಿಗೆ ಒಳ್ಳೆಯದು.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

error: Content is protected !!