ಅಜೆಕಾರು: ಹೊಲಕ್ಕೆ ಹೋಗುವ ದಾರಿಯ ತಕರಾರಿನ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ ಕುರಿತು ಪರಮೇಶ್ವರಯ್ಯ ಎಂಬವರು ಅಜೆಕಾರು ಪೊಲೀಸ್ ಠಾಣೆಯಲ್ಲಿ ಉದಯ ಕುಮಾರ್ ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ. ಮರ್ಣೆ ಗ್ರಾಮದ ಎಣ್ಣೆಹೊಳೆ ಸಮೀಪದ ಜಂಗಮಮಠದ ನಿವಾಸಿಯಾಗಿರುವ ಪರಮೇಶ್ವರಯ್ಯ ಅವರ ಜಾಗದಲ್ಲಿ ಉದಯ ಕುಮಾರ್ ಪೈಪ್ ಹಾಕಿದ್ದರು. ಪೈಪ್ ತೆಗೆಯಿರಿ ಹೊಲಕ್ಕೆ ಹೋಗಲು ಬೇರೆ ದಾರಿ ಮಾಡಿಕೊಡುತ್ತೇನೆ ಎಂದು ಪರಮೇಶ್ವರಯ್ಯ ಹೇಳಿದಾಗ ಉದಯ ಕುಮಾರ್ ಹೆಂಡತಿ ಮಕ್ಕಳು, ಸಹೋದರಿ ಮತ್ತಿತರ ಜತೆ ಸೇರಿ ರಾಡು, ಕಲ್ಲುಗಳಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭ ತಳ್ಳಾಟ ನೂಕಾಟ ನಡೆದಿದೆ. ಎಲ್ಲರೂ ಸೇರಿ ಹಲ್ಲೆ ಮಾಡಿದ್ದಾರೆ. ಗಂಡನ ರಕ್ಷಣೆಗೆ ಬಂದ ಪರಮೇಶ್ವರಯ್ಯನವರ ಹೆಂಡತಿ ಉಷಾ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದಾರಿ ತಕರಾರು : ಹಲ್ಲೆ ದೂರು ದಾಖಲು
