ನನ್ನ ನಾಡು ನನ್ನ ಹಾಡು ಕಾರ್ಯಕ್ರಮಕ್ಕೆ ಹೊರನಾಡ ಕನ್ನಡಿಗರ ಸಾಥ್
ಮುಂಬಯಿ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುತ್ತಿರುವ ನನ್ನ ನಾಡು ನನ್ನ ಹಾಡು- ಕೋಟಿ ಕಂಠ ಗಾಯನ ಮುಂಬಯಿಯಲ್ಲೂ ಅನುರಣಿಸಲಿದೆ. ಅ.28ರಂದು ಬೆಳಗ್ಗೆ 10 ಗಂಟೆಗೆ ಮೀರಾ-ಭಾಯಂದರ್ನ ಮೇವಾರ ವಾಟಿಕಾ ಸಭಾಗೃಹದಲ್ಲಿ ಮಹೇಶ್ ಶೆಟ್ಟಿ ತೆಳ್ಳಾರ್, ಎರ್ಮಾಲ್ ಹರೀಶ್ ಶೆಟ್ಟಿ ಹಾಗೂ ಗಿರೀಶ್ ಶೆಟ್ಟಿ ತೆಳ್ಳಾರ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿ ರಾಜ್ಯೋತ್ಸವ ಪುರಸ್ಕಾರವನ್ನು ಪಡೆದಿರುವ ದಯಾ ನಾಯಕ್, ಎಂಎಂ ಕೋರಿ, ತೋನ್ಸೆ ವಿಜಯಕುಮಾರ್ ಶೆಟ್ಟಿ, ಆರ್.ಕೆ.ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಕುಸುಮೋದರ ಡಿ.ಶೆಟ್ಟಿ, ಸುರೇಶ್ ರಾವ್, ಸುನೀತಾ ಶೆಟ್ಟಿ, ಚಂದ್ರಶೇಖರ್ ಪಾಲೆತ್ತಾಡಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂಘಗಳಾದ ಮೊಗವೀರ ವ್ಯವಸ್ಥಾಪನ ಮಂಡಳಿ, ಕರ್ನಾಟಕ ಸಂಘ ಮತ್ತು ಮೈಸೂರು ಅಸೋಸಿಯೇಷನ್ಗೆ ಗೌರವ ಪುರಸ್ಕಾರ ಪ್ರಧಾನ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರತ್ನಾಕರ ಶೆಟ್ಟಿ ಮುಂಡ್ಕೂರು, ಅರವಿಂದ್ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ರವೀಂದ್ರ ಶೆಟ್ಟಿ ಗುತ್ತಿನಾರ್, ಅಶೋಕ್ ಪಕ್ಕಳ, ಕರ್ನೂರ್ ಮೋಹನ್ ರೈ, ಸಚ್ಚಿದನಾಂದ ಶೆಟ್ಟಿ ಮುನ್ನಾಲಾಯಿಗುತ್ತು, ಜಿ.ಕೆ.ಕೆಂಚನಕೆರೆ, ನವೀನ್ ಶೆಟ್ಟಿ ಇನ್ನಬಾಳಿಕೆ, ಪ್ರೇಮ್ನಾಥ್ ಶೆಟ್ಟಿ ಕೊಂಡಾಡಿ, ವಿಜಯ್ ಶೆಟ್ಟಿ ಮೂಡುಬೆಳ್ಳೆ ಸಂಯೋಜಕರಾಗಿ ಸಹಕರಿಸಲಿದ್ದಾರೆ. ಮುಂಬೈಯ ಕನ್ನಡಿಗರ ಸಂಘ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಲಿವೆ.