Thursday, December 1, 2022
spot_img
Homeಸುದ್ದಿಎಲ್ಲೆಡೆ ಮೊಳಗಲಿದೆ ಕೋಟಿ ಕಂಠ ಗಾಯನ

ಎಲ್ಲೆಡೆ ಮೊಳಗಲಿದೆ ಕೋಟಿ ಕಂಠ ಗಾಯನ

ಐತಿಹಾಸಿಕ ‍ಸ್ಥಳಗಳಲ್ಲೂ ಝೇಂಕರಿಸಲಿದೆ ಐತಿಹಾಸಿಕ ಅಭಿಯಾನ

ಬೆಂಗಳೂರು : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಅ. 28 ರಂದು ರಾಜ್ಯ ಮಾತ್ರವಲ್ಲದೇ ವಿಶ್ವದಾದ್ಯಂತ ಕೋಟಿ ಕಂಠ ಗಾಯನ ಮೊಳಗಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣ, ವಿಧಾನ ಸೌಧದ ಮೆಟ್ಟಿಲು, ಮೆಟ್ರೋ, ವಿಮಾನ, ರೈಲು, ಬಸ್‌ಗಳಲ್ಲಿ ಹಾಗೂ ಆಟೋರಿಕ್ಷಾ ನಿಲ್ದಾಣಗಳು, ಕಾರಾಗೃಹಗಳು, ಐಟಿ ಬಿಟಿ ಸಂಸ್ಥೆಗಳು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾವನ, ಲಾಲ್‌ಬಾಗ್‌, ಮೈಸೂರು ಅರಮನೆ, ಚಿತ್ರದುರ್ಗದ ಕೋಟೆ, ಮಂಗಳೂರು ಕರಾವಳಿ ತೀರ, ಸಿದ್ಧಗಂಗಾ ಮಠ, ಶೃಂಗೇರಿ, ಹಂಪಿ, ಬೇಲೂರು ಮೊದಲಾದ ಐತಿಹಾಸಿಕ ತಾಣಗಳು, ಪಾವಗಡ ಸೌರಶಕ್ತಿ ಘಟಕ ಹಾಗೂ ರಾಯಚೂರು ಉಷ್ಣವಿದ್ಯುತ್‌ ಸ್ಥಾವರ, ಮಣಿಪಾಲದ ಕೆಎಂಸಿ ಮತ್ತು ಹುಬ್ಬಳ್ಳಿಯ ಕಿಮ್ಸ್‌ ಮೊದಲಾದ ವೈದ್ಯಕೀಯ ತಾಣಗಳಿಂದಲೂ ಕನ್ನಡದ ಕಂಪು ಪಸರಿಸಲಿದೆ.

ದೇಶ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಹಾಡು ಹಾಡುವ ಮೂಲಕ ಅಭಿಯಾನಕ್ಕೆ ಸಾಥ್‌ ನೀಡಲಿದ್ದಾರೆ. 10 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಮೊಳಗಲಿದ್ದು, ಕಾರ್ಕಳದ ಐತಿಹಾಸಿಕ ಕ್ಷೇತ್ರಗಳಾದ ಗೋಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಕೋಟಿ ಚೆನ್ನಯ ಥೀಮ್‌ ಪಾರ್ಕ್‌, ಹಿರಿಯಂಗಡಿ ಮಾನಸ್ತಂಭ ಬಸದಿ, ಕಾರ್ಕಳ ಹೆಬ್ರಿಯ 34 ಗ್ರಾಮ ಪಂಚಾಯತ್‌ಗಳಲ್ಲಿ, ಶಾಲಾ-ಕಾಲೇಜು, ಸರಕಾರಿ ಇಲಾಖೆಗಳು, ಸಹಕಾರಿ ಸೊಸೈಟಿಗಳು, ಫ್ಯಾಕ್ಟರಿ, ರಿಕ್ಷಾ ತಂಗುದಾಣಗಳಲ್ಲಿ ಕನ್ನಡ ಹಾಡು ಮೂಡಿಬರಲಿದೆ.

LEAVE A REPLY

Please enter your comment!
Please enter your name here

Most Popular

error: Content is protected !!