ಕ್ರೀಡೆಯಲ್ಲಿ ಲಿಂಗ ಸಮಾನತೆಯತ್ತ ಬಿಸಿಸಿಐ ಐತಿಹಾಸಿಕ ನಿರ್ಧಾರ
ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪುರುಷ ಮತ್ತು ಮಹಿಳಾ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಮಾನ ವೇತನವನ್ನು ಘೋಷಿಸುವ ಮೂಲಕ ಕ್ರೀಡೆಯಲ್ಲಿ ಲಿಂಗಸಮಾನತೆಯತ್ತ ಮೊದಲ ಹೆಜ್ಜೆಯಿಟ್ಟಿದೆ. ರೋಜರ್ ಬಿನ್ನಿ ಅಧ್ಯಕ್ಷರಾದ ಬಳಿಕ ಕೈಗೊಂಡ ಈ ನಿರ್ಧಾರ ಐತಿಹಾಸಿಕ ಎನ್ನಲಾಗಿದೆ.
ಬಿಸಿಸಿಐ ನಿರ್ಧಾರವನ್ನು ಕಾರ್ಯದರ್ಶಿ ಜಯ್ ಶಾ ಟ್ವಿಟ್ಪರ್‌ನಲ್ಲಿ ಪ್ರಕಟಿಸಿದ್ದಾರೆ. ಮ್ಯಾಚ್ ಫೀ ವಿಷಯದಲ್ಲಿ ಮಹಿಳಾ ಕ್ರಿಕೆಟಿಗರನ್ನು ಪುರುಷರ ಕ್ರಿಕೆಟಿಗರಿಗೆ ಸರಿಸಮನಾಗಿ ತರುವ ನಿರ್ಧಾರ ಹಲವು ರೀತಿಯಲ್ಲಿ ಕ್ರಾಂತಿಕಾರಿ ನಿರ್ಧಾರವಾಗಿದೆ. ಒಪ್ಪಂದ ಮಾಡಿಕೊಂಡಿರುವ ಹಿರಿಯ ಮಹಿಳಾ ಕ್ರಿಕೆಟಿಗರು, ಪುರುಷ ಕ್ರಿಕೆಟಿಗರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಟೆಸ್ಟ್‌ಗೆ 15 ಲ.ರೂ. ಏಕದಿನಕ್ಕೆ 6 ಲ.ರೂ. T20ಗೆ 3 ಲ.ರೂ. ಶುಲ್ಕ ಇನ್ನು ಮಹಿಳಾ ಕ್ರಿಕೆಟ್ ತಂಡದವರಿದೂ ಸಿಗಲಿದೆ.