Tuesday, December 6, 2022
spot_img
Homeಸುದ್ದಿಕಲುಷಿತ ನೀರು ಕುಡಿದು ಓರ್ವ ಸಾವು; 37 ಮಂದಿ ಅಸ್ವಸ್ಥ

ಕಲುಷಿತ ನೀರು ಕುಡಿದು ಓರ್ವ ಸಾವು; 37 ಮಂದಿ ಅಸ್ವಸ್ಥ

ಸ್ವಚ್ಛಗೊಳಿಸದ ಓವರ್‌ಹೆಡ್‌ ಟ್ಯಾಂಕ್‌ನ ನೀರು ಮಲೀನ ಎಂದು ಆರೋಪ

ಯಾದಗಿರಿ: ಕಲುಷಿತ ನೀರು ಕುಡಿದು ಓರ್ವ ಸಾವನ್ನಪ್ಪಿ, 37 ಮಂದಿ ಅಸ್ವಸ್ಥಗೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೊಟ್‌ಪೇಟ್ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಹೊನ್ನಪ್ಪ ಗೌಡ ಎಂದು ಗುರುತಿಸಲಾಗಿದೆ. ಶನಿವಾರದಿಂದ ಇಲ್ಲಿಯವರೆಗೆ ಹೊಟ್‌ಪೇಟೆ ಗ್ರಾಮದಲ್ಲಿ 37 ಪ್ರಕರಣಗಳು ವರದಿಯಾಗಿವೆ. ಆದರೆ ವೈದ್ಯಕೀಯ ವರದಿ ಪ್ರಕಾರ ಹೊನ್ನಪ್ಪ ಗೌಡ ಸಾವಿಗೆ ಕಲುಷಿತ ನೀರು ಸೇವನೆಯ ಜತೆಗೆ ಬೇರೆ ಕಾರಣಗಳೂ ಇವೆ. ಕಳೆದ ಮೂರು ದಿನಗಳಲ್ಲಿ ಗ್ರಾಮದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ, ಅವರ ಸಾವು ಕಲುಷಿತ ನೀರಿನಿಂದ ಸಂಭವಿಸಿಲ್ಲ ಎಂದು ಶಹಾಪುರ ತಹಶೀಲ್ದಾರ್ ಮಧುರಾಜ್ ಹೇಳಿದ್ದಾರೆ.
ಗ್ರಾಮದಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ ಕೂಡ ಹಲವು ತಿಂಗಳಿಂದ ಸ್ವಚ್ಛಗೊಳಿಸಿಲ್ಲ ಎನ್ನಲಾಗಿದೆ. ಹೊಟ್‌ಪೇಟ್‌ನಲ್ಲಿರುವ ಪಿಎಚ್‌ಸಿ ಉಪ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 31 ಮಂದಿ ಈಗಾಗಲೇ ಬಿಡುಗಡೆಯಾಗಿದ್ದು, ಇನ್ನೂ 6 ಮಂದಿಗೆ ಚಿಕಿತ್ಸೆ ಮುಂದುವರೆದಿದೆ. ಅಸ್ವಸ್ಥರಿಗೆ ಚಿಕಿತ್ಸೆ ನೀಡಲು ವೈದ್ಯರ ತಂಡ ಮತ್ತು ಆಂಬ್ಯುಲೆನ್ಸ್ ಅನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ.
15 ದಿನಗಳ ಹಿಂದೆಯಷ್ಟೇ ಜೇವರ್ಗಿ ತಾಲೂಕಿನ ಮಂದೇವಾಳ ಗ್ರಾಮದ 23 ಮಂದಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದರು. ಕಳೆದ ಜೂನ್‌ನಲ್ಲಿ ರಾಯಚೂರು ನಗರದಲ್ಲಿ ಐವರು ಸಾವನ್ನಪ್ಪಿ, ಹಲವರು ಅಸ್ವಸ್ಥರಾಗಿದ್ದರು.

LEAVE A REPLY

Please enter your comment!
Please enter your name here

Most Popular

error: Content is protected !!