Saturday, December 10, 2022
spot_img
Homeಸ್ಥಳೀಯ ಸುದ್ದಿನ್ಯೂಸ್ ಕಾರ್ಕಳ ವಿಶೇಷಾಂಕ "ದೀಪ ಸಂಭ್ರಮ" ಬಿಡುಗಡೆ

ನ್ಯೂಸ್ ಕಾರ್ಕಳ ವಿಶೇಷಾಂಕ “ದೀಪ ಸಂಭ್ರಮ” ಬಿಡುಗಡೆ

ದೀಪಾವಳಿ ಹಬ್ಬದ ಸಂಭ್ರಮಕ್ಕೆ ಹೊರತಂದಿರುವ ವಿಶೇಷ ಸಂಚಿಕೆ

ಕಾರ್ಕಳ : ನ್ಯೂಸ್ ಕಾರ್ಕಳ ಸುದ್ದಿ ಜಾಲತಾಣ ದೀಪಾವಳಿ ಹಬ್ಬದ ಪ್ರಯುಕ್ತ ಹೊರತಂದಿರುವ ವಿಶೇಷಾಂಕ “ದೀಪ ಸಂಭ್ರಮ 2022″ವನ್ನು ಅ. 26 ರಂದು ಕಚೇರಿಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ವಿಶೇಷಾಂಕ ಬಿಡುಗಡೆಗೊಳಿಸಿದರು.
ಅರ್ಚಕ ಜ್ಞಾನಚಂದ್ರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಜಾರ್ಜ್‌ ಕ್ಯಾಸ್ತಲಿನೋ, ಉದ್ಯಮಿ ಗುಣಪಾಲ್‌ ಜೈನ್‌, ಡಾ. ಹರ್ಷಾ ಕಾಮತ್‌, ಉಪನ್ಯಾಸಕಿ ಸಂಗೀತಾ ಕುಲಾಲ್‌ ಬೋಳ, ಶ್ರುತಿ ಜೈನ್‌ ರೆಂಜಾಳ, ನ್ಯೂಸ್ ಕಾರ್ಕಳ ಸಲಹಾ ಸಮಿತಿ ಸದಸ್ಯರಾದ ಕೀರ್ತನ್ ಕುಮಾರ್, ಮೋಹನ್‌ ಕಾರ್ಕಳ, ಅರುಣ್‌ ಮಾಂಜ, ಪ್ರಭಾತ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಜಾಹೀರಾತು ವಿಭಾಗದ ಮುಖ್ಯಸ್ಥೆ ಜ್ಯೋತಿ ರಮೇಶ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

error: Content is protected !!